‘ಗ್ರೀನ್ ಹರಮ್ ಸ್ಕ್ವೇರ್’ | ಮಸ್ಜಿದ್-ಉಲ್-ಹರಮ್‌ನಲ್ಲಿ ಹಸಿರೀಕರಣಕ್ಕೆ ಚಾಲನೆ

Prasthutha|

ಮಕ್ಕಾ:  ಮಸ್ಜಿದ್-ಉಲ್-ಹರಮ್‌ನ ಸುತ್ತಲೂ ಮರಗಳನ್ನು ನೆಡುವ ಮೂಲಕ ‘ಗ್ರೀನ್ ಹರಮ್ ಸ್ಕ್ವೇರ್’ ಯೋಜನೆಯು ಪ್ರಾರಂಭಗೊಂಡಿದೆ. ಎರಡು ಹರಂ ಗಳ ಕಾರ್ಯಾಲಯದ ಮುಖ್ಯಸ್ಥ ಶೇಖ್ ಡಾ. ಅಬ್ದುರ್ರಹ್ಮಾನ್ ಅಲ್ ಸುದೈಸ್ ಈ ಯೋಜನೆಯನ್ನು ಉದ್ಘಾಟಿಸಿದರು. ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಘೋಷಿಸಿದ ಗ್ರೀನ್ ಸೌದಿ ಇನಿಶಿಯೇಟಿವ್‌ನ ಒಂದು ಭಾಗವಾಗಿ ಹಸಿರೀಕರಣದ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಶೇಖ್ ಸುದೈಸ್ ಹೇಳಿದ್ದಾರೆ.

- Advertisement -

ಸಮಗ್ರ ಆರ್ಥಿಕ ಸುಧಾರಣಾ ಯೋಜನೆಯಾದ ‘ವಿಷನ್ 2030’ ಮೂಲಕ ಸಸ್ಯವರ್ಗದ ಪ್ರದೇಶಗಳನ್ನು ರಕ್ಷಿಸಲು ಮತ್ತು ಹೆಚ್ಚಿಸಲು ಆಡಳಿತವು ಉದ್ದೇಶಿಸಿದೆ ಎಂದು ಅವರು ಹೇಳಿದ್ದಾರೆ. ಯೋಜನೆಯ ಅನುಷ್ಠಾನದಲ್ಲಿನ ಅಡೆತಡೆಗಳು ಮತ್ತು ಅವಶ್ಯಕತೆಗಳನ್ನು ಅಧ್ಯಯನ ಮಾಡಲು ಸಮಿತಿಯೊಂದನ್ನು ರಚಿಸುವಂತೆ ಈ ಹಿಂದೆ ಎರಡು ಹರಮ್ ನ ಕಾರ್ಯಾಲಯದ ಮುಖ್ಯಸ್ಥ ಸುದೈಸ್ ನಿರ್ದೇಶನ ನೀಡಿದ್ದರು. 

ಪ್ರಸ್ತುತ ಸುಮಾರು 25 ಸ್ಥಳಗಳಲ್ಲಿರುವ 7,344.5 ಚದರ ಮೀಟರ್ ಖಾಲಿ ಭೂಮಿಯಲ್ಲಿ ಮರಗಳನ್ನು ನೆಡುವ ಯೋಜನೆಯನ್ನು ಉದ್ಘಾಟನೆಯ ಸಮಯದಲ್ಲಿ ಶೇಖ್ ಸುದೈಸ್ ಪರಿಶೀಲಿಸಿದ್ದಾರೆ.

Join Whatsapp