ಭೋಪಾಲ: ಚಿರತೆಯ ಬಾಯಿಗೆ ತುತ್ತಾಗಿದ್ದ ತನ್ನ ಮಗನನ್ನು ತಾಯಿಯೊಬ್ಬಳು ಏಕಾಂಗಿಯಾಗಿ ಹೋರಾಡಿ ತನ್ನ ಮಗನನ್ನು ಸಾಹಸಮಯ ರೀತಿಯಲ್ಲಿ ರಕ್ಷಿಸಿದ ಘಟನೆ ಮಧ್ಯಪ್ರದೇಶ ಸಿಧಿ ಜಿಲ್ಲೆಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಬಳಿ ನಡೆದಿದೆ.
ಬುಡಕಟ್ಟು ಮಹಿಳೆ ಕಿರಣ, ಭಾನುವಾರ ರಾತ್ರಿ ತನ್ನ ಮೂರು ಮಕ್ಕಳೊಂದಿಗೆ ಮನೆಯ ಹೊರಗೆ ಬೆಂಕಿಯಿಂದ ಚಳಿ ಕಾಯಿಸುತ್ತಾ ಕುಳಿತಿದ್ದಳು, ಈ ಸಂದರ್ಭ ಎಗರಿದ ಚಿರತೆ 6 ವರ್ಷದ ಬಾಲಕ ರಾಹುಲ್ ನನ್ನು ಹೊತ್ತೊಯ್ದಿದೆ. ಕೂಡಲೇ ಎಚ್ಚೆತುಕೊಂಡ ಕಿರಣ, ಇಬ್ಬರು ಮಕ್ಕಳನ್ನು ಮನೆಯೊಳಗೆ ಕಳುಹಿಸಿ ಚಿರತೆಯನ್ನು ಬೆನ್ನತ್ತಿ ಓಡಿದ್ದಾರೆ.
ಬಳಿಕ ಚಿರತೆಯೊಂದಿಗೆ ಹೋರಾಡಿ ಮಗನನ್ನು ಸಾವಿನ ದವಡೆಯಿಂದ ರಕ್ಷಿಸಿ, ಮನೆಗೆ ಕರೆತಂದಿದ್ದಾರೆ.
ಘಟನೆಯಲ್ಲಿ ತಾಯಿ ಹಾಗೂ ಮಗನಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಕಿರಣ ಅವರ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.