ಮಂಗಳೂರು | ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ ದೇವಸ್ಥಾನದಲ್ಲಿ ಅದ್ದೂರಿ ಮದುವೆ; ಎಸಿ ನೇತೃತ್ವದಲ್ಲಿ ದಾಳಿ

Prasthutha|

ಮಂಗಳೂರು : ಲಾಕ್‌ ಡೌನ್‌ ನಿಯಮ ಉಲ್ಲಂಘಿಸಿ ನಗರದ ಮಂಗಳಾದೇವಿ ದೇವಸ್ಥಾನದ ಬಳಿಯ ವೇದಿಕೆಯಲ್ಲಿ ಏಕಕಾಲದಲ್ಲಿ ವಿವಾಹ ಕಾರ್ಯಗಳು ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಕ್ರಮ ಕೈಗೊಂಡಿದ್ದಾರೆ. ಲಾಕ್‌ ಡೌನ್‌ ನಿಯಮ ಉಲ್ಲಂಘಿಸಿ ಮದುವೆ ನಡೆಯುತ್ತಿದೆ ಎಂಬ ದೂರಿನ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಎಸಿ ಮದನ್‌ ಮೋಹನ್‌ ನೇತೃತ್ವ ತಂಡ ದಾಳಿ ನಡೆಸಿ, ಕೇಸ್‌ ದಾಖಲಿಸಿದೆ.

- Advertisement -

ಬಿಜೆಪಿಯ ನಾಮನಿರ್ದೇಶಿತ ಕಾರ್ಪೊರೇಟರ್‌ ಭಾಸ್ಕರ್‌ ಚಂದ್ರ ಅವರ ಪುತ್ರಿಯ ವಿವಾಹ ಸೇರಿದಂತೆ ಒಟ್ಟು ನಾಲ್ಕು ಮದುವೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಮದುವೆಗೆ ನೂರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಕೋವಿಡ್‌ ನಿಯಮ ಉಲ್ಲಂಘಿಸಿ ಏಕಕಾಲದಲ್ಲಿ ನಾಲ್ಕು ಜೋಡಿ ವಿವಾಹಕ್ಕೆ ಅನುಮತಿ ನೀಡಲಾಗಿದೆ. ಮದುವೆ ನಡೆಯಲು ಅನುಮತಿ ನೀಡಿದವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಈ ಬಗ್ಗೆ ವಿವರವಾದ ವರದಿ ಪಡೆಯಲಾಗುವುದು ಎಂದು ಎಸಿ ಮದನ್‌ ಮೋಹನ್‌ ಹೇಳಿದ್ದಾರೆ.

- Advertisement -

ಮದುವೆಗೆ ಅನುಮತಿ ನೀಡಿದ ದೇವಸ್ಥಾನದ ಆಡಳಿತ ಮಂಡಳಿಯನ್ನು ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ನಾಲ್ಕು ಮದುವೆಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧವೂ ಕೈಗೊಳ್ಳುವಂತೆ ಎಸಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ದಾಳಿಯ ವೇಳೆ ಮನಪಾ ಉಪ ಆಯುಕ್ತ ಬಿನೊಯ್‌, ಧಾರ್ಮಿಕ ದತ್ತಿ ಇಲಾಖೆಯ ಸಣ್ಣ ರಂಗಯ್ಯ, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.   

Join Whatsapp