ನಾವೂರು ಗ್ರಾಮ ಪಂಚಾಯತ್ ಕಾಂಗ್ರೆಸ್ ವಶಕ್ಕೆ | ದಂಪತಿಗೆ ಭರ್ಜರಿ ಜಯ

Prasthutha|

ಬಂಟ್ವಾಳ : ನಾವೂರು ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸುವರ್ಣ ಕುಮಾರ್ ಜೈನ್ ಹಾಗೂ ತ್ರಿಶಾಲಾ ಸುವರ್ಣ ಜೈನ್ ದಂಪತಿ ಗೆಲುವಿನ ನಗೆ ಬೀರಿದ್ದಾರೆ.

- Advertisement -

ಇಲ್ಲಿನ ನಾವೂರು ವಾರ್ಡ್ ನಲ್ಲಿ ಸುವರ್ಣ ಕುಮಾರ್ ಜೈನ್ ಸ್ಪರ್ಧಿಸಿದ್ದು, ದೇವಸ್ಯ ವಾರ್ಡ್ ನಲ್ಲಿ ಇವರ ಪತ್ನಿ ತ್ರಿಶಾಲಾ ಸುವರ್ಣ ಜೈನ್ ಗೆದ್ದಿದ್ದಾರೆ.

ನಾವೂರು ಗ್ರಾಮ ಪಂಚಾಯತ್ ನಲ್ಲಿ 17 ಸ್ಥಾನಗಳಲ್ಲಿ 10ರಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಏಳರಲ್ಲಿ ಬಿಜೆಪಿಗ ಬೆಂಬಲಿತರು ಜಯ ಸಾಧಿಸಿದ್ದಾರೆ. ನಾವೂರು ಗ್ರಾಮ ಪಂಚಾಯತ್ ನಲ್ಲಿ ಆ ಮೂಲಕ ಕಾಂಗ್ರೆಸ್ ಬೆಂಬಲಿತರು ಅಧಿಕಾರಕ್ಕೇರಿದ್ದಾರೆ. ಕಳೆದ ಬಾರಿ ಇಲ್ಲಿ 12 ಸ್ಥಾನಗಳಲ್ಲಿ ಬಿಜೆಪಿ, 5 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು.  

Join Whatsapp