ಆರ್‌ಎಸ್‌ಎಸ್‌ ಸಂಸ್ಥೆಗಳಿಗೆ ಸರ್ಕಾರ ಮಂಜೂರು ಮಾಡಿದ್ದ ಭೂಮಿ ವಾಪಸ್‌ ಪಡೆಯುತ್ತೇವೆ: ದಿನೇಶ್‌ ಗುಂಡೂರಾವ್‌

Prasthutha|

ಬೆಂಗಳೂರು: ಆರ್‌ಎಸ್‍ಎಸ್‍ ಅಂಗಸಂಸ್ಥೆಗಳಿಗೆ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ವಾಪಸ್ ಪಡೆಯಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದ್ದಾರೆ.

- Advertisement -

ವಿಧಾನಸೌಧದಲ್ಲಿ ಶುಕ್ರವಾರ ಈ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ರಾಜ್ಯದ ನೂರಾರು ಎಕರೆ ಸರ್ಕಾರಿ ಜಮೀನು ಪರಭಾರೆ ಮಾಡಿ ಆರ್‌ಎಸ್‌ಎಸ್‌ಗೆ ನೀಡಲಾಗಿದೆ. ‌ಸರ್ಕಾರಿ ಜಮೀನುಗಳನ್ನು ಆರ್‌ಎಸ್‌ಎಸ್ ಸೇರಿದಂತೆ ಅದರ ಅಂಗ ಸಂಸ್ಥೆಗಳಿಗೆ ನೀಡಿದ್ದಾರೆ.‌ ತಮ್ಮ ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬೆಳವಣಿಗೆಗಾಗಿ ಹೀಗೆ ಮಾಡಿದ್ದಾರೆ ಎಂದು‌ ಆರೋಪ ಮಾಡಿದರು.

ಬಿಜೆಪಿ‌ ಸರ್ಕಾರದ ಅವಧಿಯಲ್ಲಿ ಕಾನೂನು ಉಲ್ಲಂಘಿಸಿ ಭೂಮಿ ನೀಡಲಾಗಿದೆ. ಹೇಗೆ ಕಾನೂನಾತ್ಮಕವಾಗಿ ನಡೆದಿದೆ ಎಂಬುದನ್ನು ಕಂದಾಯ ಇಲಾಖೆ ಪರಿಶೀಲಿಸಿ ಕ್ರಮ‌ ಕೈಗೊಳ್ಳಲಿದೆ ಎಂದರು. 

- Advertisement -

ಸಂಘ ಪರಿವಾರಕ್ಕೆ ಮಂಜೂರಾದ ಭೂಮಿಯ ಲೆಕ್ಕ

► ದೇವನಹಳ್ಳಿಯಲ್ಲಿ ಚಾಣಕ್ಯ ಖಾಸಗಿ ವಿವಿಗೆ 116.16 ಎಕರೆ ಭೂಮಿ

► ಕೆಐಎಡಿಬಿಗೆ ಸೇರಿದ 250 ಕೋಟಿ ಮೌಲ್ಯದ ಭೂಮಿ ಕೇವಲ 50.17 ಕೋಟಿಗೆ ಮಾರಾಟ

► ಹೆಸರಘಟ್ಟದ ಹುರುಳಿಚಿಕ್ಕನಹಳ್ಳಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‍ಗೆ 9 ಎಕರೆ ಗೋಮಾಳ ಭೂಮಿ

► ತಾವರೆಕೆರೆಯ ಕುರುಬರಹಳ್ಳಿಯಲ್ಲಿ 35.33 ಎಕರೆ ಗೋಮಾಳ ಭೂಮಿ

► ಆರ್‌ಎಸ್‍ಎಸ್‍ ಅಂಗಸಂಸ್ಥೆ ಜನಸೇವಾ ಟ್ರಸ್ಟ್‍ಗೆ 35.33 ಎಕರೆ ಪರಭಾರೆ

► ಹೊಸಪೇಟೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‍ಗೆ 5 ಎಕರೆ ಜಮೀನು ಮಂಜೂರು

► ಬಳ್ಳಾರಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‍ಗೆ ರಿಯಾಯಿತಿ ದರದಲ್ಲಿ ಸಿಎ ನಿವೇಶನ



Join Whatsapp