ವಿದ್ಯಾರ್ಥಿಗಳ ಶೂ, ಸಾಕ್ಸ್ ನಿಲ್ಲಿಸಿದ ಸರ್ಕಾರ : msf ದ. ಕ ಜಿಲ್ಲಾ ಸಮಿತಿ ಖಂಡನೆ

Prasthutha|

ಬೆಂಗಳೂರು: ಸರ್ಕಾರಿ ಶಾಲೆಗಳ ಜನಪ್ರಿಯವಾದ ಯೋಜನೆಯಾದ ಶೂ, ಸಾಕ್ಸ್, ಸೈಕಲ್ ಭಾಗ್ಯಕ್ಕೆ ಸರ್ಕಾರ ಕತ್ತರಿ ಹಾಕಿದೆ, ಕಳೆದ ಬಾರಿಯಂತೆ ಈ ಬಾರಿಯೂ ಸರ್ಕಾರಿ ಶಾಲೆಯ ಮಕ್ಕಳಿಗೆ ಸೈಕಲ್, ಶೂ, ಸಾಕ್ಸ್ ವಿತರಣೆ ಇಲ್ಲ. ಪ್ರಸಕ್ತ ಸಾಲಿನ  ಬಜೆಟ್‌ ನಲ್ಲಿ ಅನುದಾನ ಮೀಸಲಿಡದೇ ಇರುವುದರಿಂದ ಈ ಯೋಜನೆಗಳನ್ನು ಕೈ ಬಿಡಲು ಕಾರಣ ವೆಂದು ಶಿಕ್ಷಣ ಇಲಾಖೆ ಹೇಳಿದೆ.

- Advertisement -

ಕಳೆದ ಬಾರಿ ಕೋವಿಡ್ ಕಾರಣ ಶೋ, ಸಾಕ್ಸ್, ಸೈಕಲ್ ನೀಡಿಲ್ಲ. ಆದರೆ ಈ ಬಾರಿಯೂ ಆರ್ಥಿಕ ಕೊರತೆಯ ನೆಪವೊಡ್ಡಿ ವಿದ್ಯಾರ್ಥಿಗಳ ಯೋಜನೆಗೆ ಸರ್ಕಾರ ಕೈ ಹಾಕಿರುವುದು ಖಂಡನರ್ಹ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಅದನ್ನು ಬೆಳಸುವ ಯೋಜನೆ ರೂಪಿಸುವ ಬದಲು ಇರುವ ಯೋಜನೆಯನ್ನು ನಿಲ್ಲಿಸಿ ಸರಕಾರಿ ಶಾಲೆಗಳ ಅವನತಿಗೆ ಸರಕಾರವೇ ನೇರವಾಗಿ ಪ್ರಯತ್ನಿಸಿದಂತಿದೆ..ಮುಖ್ಯ ಮಂತ್ರಿಗಳು, ಶಿಕ್ಷಣ ಇಲಾಖೆ ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡದೆ ಇರುವ ಯೋಜನೆಯನ್ನು ಮುಂದುವರಿಸಬೇಕು.. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಪ್ರತಿಭಟನೆಯ ಎಚ್ಚರಿಕೆಯನ್ನು msf ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ



Join Whatsapp