ಬಂಟ್ವಾಳ: ಅಡಿಕೆ ಮಾರಿ ಬಸ್ ಖರೀದಿಸಿದ ಸರ್ಕಾರಿ ಶಾಲೆ

Prasthutha|

ಬಂಟ್ವಾಳ: ಅಡಿಕೆ ಮಾರಿ ಸರ್ಕಾರಿ ಶಾಲೆಯೊಂದು ಬಸ್ ಖರೀದಿಸಿ ಗಮನ ಸೆಳೆದಿದೆ.

- Advertisement -

ಸುಮಾರು 628 ಅಡಿಕೆ ಮರಗಳು ನೀಡಿದ ಫಲದಿಂದ ದೊರೆತ ಆರ್ಥಿಕ ಆದಾಯದಿಂದ ಬಂಟ್ವಾಳ ತಾಲೂಕಿನ ಮಿತ್ತೂರಿನ ಸರ್ಕಾರಿ ಶಾಲೆ ಬಸ್ ಖರೀದಿ ಮಾಡಿದೆ.

ತನ್ನ ಕೈತೋಟದ ಮೂಲಕ ಈಗಾಗಲೇ ಪ್ರಸಿದ್ಧಿ ಪಡೆದಿರುವ ಶಾಲೆ ಬಸ್ ಖರೀದಿಸುವ ಮೂಲಕ ಗಮನ ಸೆಳೆದಿದೆ.

- Advertisement -

ಸುಮಾರು 118 ಮಕ್ಕಳು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದುವರೆಗೆ ಆಟೋಗಳಲ್ಲಿ ಬರುತ್ತಿದ್ದರು. ಇನ್ನು, ಬಸ್ ನಲ್ಲಿ ಎರಡು ಟ್ರಿಪ್ ​ಗಳನ್ನು ಮಾಡುವ ಮೂಲಕ ಬರಲು ಸಾಧ್ಯ. ಇದರ ಖರ್ಚುವೆಚ್ಚವನ್ನು ಪೋಷಕರು ಸಮಾನವಾಗಿ ಭರಿಸಲಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಸರೋಜಾ ಎ. ತಿಳಿಸಿದ್ದಾರೆ.



Join Whatsapp