ಸರ್ಕಾರಕ್ಕೆ ಕೆಲವು ಕೇಸ್ ಗಳನ್ನು ಹಿಂಪಡೆಯುವ ಅಧಿಕಾರ ಇದೆ: ಸಿಎಂ ಸಿದ್ದರಾಮಯ್ಯ

Prasthutha|

ಮೈಸೂರು: ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಬರೋಬ್ಬರಿ 43 ಕೇಸ್ ಗಳನ್ನ ರಾಜ್ಯ ಸರ್ಕಾರ ವಾಪಸ್ ಪಡೆದಿದೆ.

- Advertisement -


ಕ್ಯಾಬಿನೆಟ್ ಸಭೆಯ ಈ ನಿರ್ಧಾರ ಸದ್ಯ ರಾಜ್ಯ ರಾಜಕೀಯದಲ್ಲಿ ಗುದ್ದಾಟಕ್ಕೆ ಕಾರಣವಾಗಿದೆ.


ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು,  ಕೆಲವು ಮೊಕದ್ದಮೆಗಳನ್ನು ವಾಪಸ್ ಪಡೆದುಕೊಳ್ಳಲು ಸರ್ಕಾರಕ್ಕೆ ‌ಅಧಿಕಾರ ಇದೆ. ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ‌ ರಚಿಸಿದ್ದೆವು. ಅವರು ಅವರ ವಿವೇಚನೆ ಬಳಸಿ ವಾಪಸ್ ತೆಗೆದುಕೊಂಡಿದ್ದಾರೆ.‌ ಅದನ್ನು ನಾವು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿದ್ದೇವೆ. ಏನಿದೆ ಎಂಬುದನ್ನು ‌ನೋಡುತ್ತೇನೆ ಎಂದು ಹೇಳಿದರು.

- Advertisement -


ದಸರಾ ಹಿನ್ನೆಲೆ ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ನಗರದ ಮಂಡಕಳ್ಳಿ ಏರ್ ಪೋರ್ಟ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಬಿಜೆಪಿ ಸುಳ್ಳು ವಿಚಾರಕ್ಕೆ ಯಾವಾಗಲೂ ಹೋರಾಟ ಮಾಡುವುದು. ಈ ಬಗ್ಗೆ ಪರಿಶೀಲನೆ ಮಾಡಿದ ನಂತರ ಮಾತನಾಡುತ್ತೇನೆ ಎಂದಿದ್ದಾರೆ.


ರಾಜ್ಯ ಸರ್ಕಾರದ ಜಾಹೀರಾತಿಗೆ ಬಿಜೆಪಿ ನಾಯಕರ ಕಿಡಿ ವಿಚಾರವಾಗಿ ಮಾತನಾಡಿದ ಸಿಎಂ, ದಸರಾ ಅಂದರೆ ದುಷ್ಟ ಶಕ್ತಿಗಳ ಸಂಹಾರ, ಶಿಷ್ಟರ ರಕ್ಷಣೆಯೇ ದಸರಾ. ವಿಜಯನಗರದ ಅರಸರು ವಿಜಯದ ಸಂಕೇತವಾಗಿ ಆಚರಿಸುತ್ತಿದ್ದರು. ಮೈಸೂರು ಅರಸರು ಅದನ್ನೇ ಮುಂದುವರಿಸಿದರು. ಇವತ್ತು ಅದೇ ಸಂಪ್ರದಾಯ ಮುಂದುವರಿದಿದೆ ಎಂದರು.



Join Whatsapp