ನವದೆಹಲಿ: ರಾಮ ಮಂದಿರ ಪ್ರಾಣಪ್ರತಿಷ್ಠೆ ಪ್ರಯುಕ್ತ ಜನವರಿ 22ರಂದು ಕೇಂದ್ರ ಸರ್ಕಾರಿ ನೌಕರರು, ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ಜನವರಿ 22ರಂದು ಮಧ್ಯಾಹ್ನ 2.30ರ ವರೆಗೆ ಕೇಂದ್ರ ಸರ್ಕಾರ ಎಲ್ಲಾ ಸರ್ಕಾರಿ ಕಚೇರಿ, ನೌಕರರಿಗೆ ರಜೆ ನೀಡಲಾಗಿದೆ.
ಜನವರಿ 22ರಂದು ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಅರ್ಧ ದಿನ ಮುಚ್ಚಲಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.