ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2019-20ರಿಂದ 2022-23ರವರೆಗೆ ನಡೆದಿರುವ ಯೋಜನೆಗಳ ಕಾಮಗಾರಿಯಲ್ಲಿ ಆಗಿದೆ ಎನ್ನಲಾದ ಅಕ್ರಮಗಳ ಕುರಿತಾದ ತನಿಖೆ ನಡೆಸಲು ರಚಿಸಲಾಗಿದ್ದ ತನಿಖಾ ಸಮಿತಿಯನ್ನು ಸರ್ಕಾರ ರದ್ದುಪಡಿಸಿದೆ. ತನಿಖೆಯನ್ನು ನಾಗಮೋಹನ್ ದಾಸ್ ಸಮಿತಿಗೆ ವರ್ಗಾಯಿಸಿದೆ.
ಮುಂದಿನ ತನಿಖೆಯಲ್ಲಿ ನಾಗಮೋಹನ್ ದಾಸ್ ವಿಚಾರಣಾ ಆಯೋಗವೇ ನಡೆಸುವುದೆಂದು ಅಭಿಪ್ರಾಯಪಟ್ಟ ಸರಕಾರ, ಈ ಕೂಡಲೇ ತಜ್ಞರ ಸಮಿತಿಯು ತಮ್ಮ ಸುಪರ್ದಿಯಲ್ಲಿರುವ ಕಡತ, ದಾಖಲೆ, ಮಾಹಿತಿಯನ್ನು ಆಯೋಗಕ್ಕೆ ನೀಡುವಂತೆ ಸೂಚಿಸಿದೆ.
ಘನತ್ಯಾಜ್ಯ ನಿರ್ವಹಣೆ ಕಾಮಗಾರಿ, ನಕ್ಷೆ ಮಂಜೂರಾತಿ, ಸ್ವಾಧೀನ ಪತ್ರ ನೀಡುವಿಕೆ, ಕೆರೆ ಅಭಿವೃದ್ಧಿ ಕಾಮಗಾರಿ, ಸ್ಮಾರ್ಟ್‌ಸಿಟಿ ಕಾಮಗಾರಿ, ವಾರ್ಡ್ ಮಟ್ಟದಲ್ಲಿ ನಡೆದ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ದೂರುಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ನಾಲ್ಕು ತಜ್ಞರ ಸಮಿತಿ ರಚಿಸಿ, ತನಿಖೆಯೂ ಆರಂಭವಾಗಿತ್ತು. ಈ ನಡುವೆ ಕೋರ್ಟ್ ಮಧ್ಯ ಪ್ರವೇಶಿಸಿ ತಜ್ಞರ ಸಮಿತಿಯ ತನಿಖೆಗೆ ತಡೆಯಾಜ್ಞೆ ನೀಡಿದೆ.