ರಾಜಭವನದಲ್ಲಿ ಹಾಕಿ ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿದ ರಾಜ್ಯಪಾಲರು

Prasthutha|

ಬೆಂಗಳೂರು: ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶುಕ್ರವಾರ ರಾಜಭವನದಲ್ಲಿ ಪುರುಷ ಹಾಕಿ ವಿಶ್ವಕಪ್ ಟ್ರೋಫಿ 2023ಯನ್ನು ಅನಾವರಣಗೊಳಿಸಿದರು.

- Advertisement -

ಪುರುಷ ಹಾಕಿ ವಿಶ್ವಕಪ್ ಟ್ರೋಫಿ 2023 ಶುಕ್ರವಾರ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದು, ರಾಜಭವನದಲ್ಲಿ ಅದನ್ನು ಕರ್ನಾಟಕ ರಾಜ್ಯ ಹಾಕಿ ಸಂಘದ ಪದಾಧಿಕಾರಿಗಳು, ಸದಸ್ಯರು, ರಾಜ್ಯ ಹಾಕಿ ಕ್ರೀಡಾಪಟುಗಳು ಹಾಗೂ ಹಾಕಿ ಅಭಿಮಾನಿಗಳ ಮುಂದೆ ಅನಾವರಣಗೊಳಿಸಲಾಯಿತು.

ನಂತರ ಮಾತನಾಡಿದ ಅವರು, ಪುರುಷರ ಹಾಕಿ ವಿಶ್ವಕಪ್ ಜನವರಿ 13-29 ರವರೆಗೆ ಒಡಿಶಾದಲ್ಲಿ ನಡೆಯಲಿರುವುದು ಸಂತಸದ ವಿಷಯ. ಈ ಸ್ಪರ್ಧೆಯಲ್ಲಿ ಭಾರತದ ತಂಡ ಗೆಲವು ಸಾಧಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದ ಅವರು, ಭಾರತದ ಹಾಕಿ ತಂಡಕ್ಕೆ ಶುಭ ಹಾರೈಸಿದರು.

- Advertisement -

ಈ ಸಂದರ್ಭದಲ್ಲಿ ಕರ್ನಾಟಕ ಹಾಕಿ ಅಸೋಸಿಯೇಶನ್  ಅಧ್ಯಕ್ಷರಾದ ಸುಬ್ರಮಣಿ ಗುಪ್ತ, ಕಾರ್ಯದರ್ಶಿ ಡಾ.ಎ.ಬಿ ಸುಬ್ಬಯ್ಯ, ಒಲಂಪಿಕ್ ಅಸೋಸಿಯೇಶನ್’ನ ಕಾರ್ಯದರ್ಶಿ ಅನಂತ್ ರಾಜ್ ಸೇರಿದಂತೆ ರಾಜ್ಯ ಹಾಕಿ ಕ್ರೀಡಾಪಟುಗಳು ಮುಂತಾದ ಗಣ್ಯರು ಉಪಸ್ಥಿತರಿದ್ದರು.

Join Whatsapp