ಪಠ್ಯ ಪುಸ್ತಕವನ್ನು ಸಮರ್ಥಿಸಲು ಸರಕಾರದಿಂದಲೇ ಟೂಲ್ ಕಿಟ್ ಪ್ರಯೋಗ ಬಹಿರಂಗ

Prasthutha|

►► ಒಂದೇ ಟ್ವೀಟನ್ನು ಕಾಪಿ ಪೇಸ್ಟ್ ಮಾಡಿದ ಹಲವು ಸಚಿವರು !

- Advertisement -

ಬೆಂಗಳೂರು: ಆರೆಸ್ಸೆಸ್ ಬೆಂಬಲಿಗ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದು ಹಲವು ಸಾಹಿತಿಗಳು ತಮ್ಮ ಪಠ್ಯವನ್ನು ಕೈಬಿಡುವಂತೆ ಮನವಿ ಮಾಡಿರುವಾಗಲೇ ಪಠ್ಯ ಪುಸ್ತಕವನ್ನು ಸಮರ್ಥಿಸಲು ಸರಕಾರದಿಂದಲೇ ಟೂಲ್ ಕಿಟ್ ಪ್ರಯೋಗ ನಡೆದಿರುವುದು ಬಹಿರಂಗಗೊಂಡಿದೆ.


“ಪಠ್ಯವಿರೋಧಿ ತಂತ್ರದ ಎಲ್ಲ ಸಾಧನಗಳೂ ಮುಗಿದು ದಿಕ್ಕೆಟ್ಟಿರುವ ಕಾಂಗ್ರೆಸ್ ಕೊನೆಯ ದಾಳವಾಗಿ ತಾನು ಪೋಷಿಸಿಕೊಂಡು ಬಂದಿರುವ ಸಾಹಿತಿಗಳನ್ನು ಈಗ ಛೂ ಬಿಟ್ಟಿದೆ. ಒಬ್ಬರ ಹಿಂದೆ ಒಬ್ಬರಂತೆ ಸಾಹಿತಿಗಳು ಕಾಂಗ್ರೆಸ್ ನೀಡಿದ್ದ ಪದವಿಭಿಕ್ಷೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಸರ್ಕಾರ ಇದನ್ನು ಅಂಗೀಕರಿಸಬೇಕು!” #AcceptToolkitResignation ಎಂಬ ಬರಹಗಳುಳ್ಳ ಟ್ವೀಟನ್ನು ರಾಜ್ಯದ ಹಲವು ಸಚಿವರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

- Advertisement -


ಒಂದು ಅಕ್ಷರವೂ ಬದಲಾವಣೆ ಇಲ್ಲದೆ ಸಚಿವರಾದ ಆರ್.ಅಶೋಕ್, ಬಿ.ಸಿ.ಪಾಟೀಲ್, ಪ್ರಭು ಚೌಹಾಣ್, ಬಿ.ಶ್ರೀರಾಮುಲು, ಮುರುಗೇಶ್ ನಿರಾಣಿ ಸೇರಿದಂತೆ ಹಲವು ಸಚಿವರು ಇದೇ ಟ್ವೀಟನ್ನು ಕಾಪಿ ಪೇಸ್ಟ್ ಮಾಡಿದ್ದಾರೆ. ಇದು ನಾಗ್ಪುರದಿಂದ ಬಂದಿದ್ದೋ ಅಥವಾ ಮಲ್ಲೇಶ್ವರಂನಿಂದ ಬಂದಿದ್ದೋ ಎಂದು ಕೆಲವು ನೆಟ್ಟಿಗರು ಕುಟುಕಿದ್ದಾರೆ.

Join Whatsapp