ಇನ್ನು ಮುಂದೆ ಈ ಜಿಲ್ಲೆಯ ಸರ್ಕಾರಿ ನೌಕರರು ಜೀನ್ಸ್, ಟಿ-ಶರ್ಟ್ ಧರಿಸುವಂತಿಲ್ಲ!

Prasthutha|

ಸಂಭಲ್ (ಉತ್ತರ ಪ್ರದೇಶ): ಸರ್ಕಾರಿ ಅಧಿಕಾರಿಗಳು ಅನೌಪಚಾರಿಕ ಉಡುಪುಗಳನ್ನು ಧರಿಸುವಂತಿಲ್ಲ ಎಂಬ ನಿಯಮ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಗಳನ್ನು ಧರಿಸುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಸಂಜೀವ್ ರಂಜನ್ ಆದೇಶ ಹೊರಡಿಸಿದ್ದಾರೆ.

- Advertisement -

ಕಚೇರಿಯಲ್ಲಿ ಸಭ್ಯತೆ ಕಾಪಾಡುವುದು ಹಾಗೂ ಜಿಲ್ಲೆಯಲ್ಲಿ ರೂಪಿಸಿರುವ ನೀತಿ ಸಂಹಿತೆಯನ್ನು ನೌಕರರು ಪಾಲಿಸಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಸರಿಯಾದ ಬಟ್ಟೆಗಳನ್ನು ಧರಿಸುವುದರಿಂದ ಕೆಲಸ ಮಾಡುವ ನೌಕರರಲ್ಲಿ ಗಂಭೀರತೆಯನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ರಂಜನ್ ಹೇಳಿದ್ದಾರೆ. ಆದರೆ, ಸರ್ಕಾರಿ ನೌಕರರಿಗೆ ಯಾವುದೇ ನಿರ್ದಿಷ್ಟ ವಸ್ತ್ರ ಸಂಹಿತೆ ಯನ್ನು ಅವರು ತಿಳಿಸಿಲ್ಲ.

- Advertisement -

 “ಕಚೇರಿಯಲ್ಲಿ ಬಹುತೇಕ ಮಂದಿ ಕ್ಯಾಶುವಲ್ ಡ್ರೆಸ್ ಗಳಾದ ಟಿ ಶರ್ಟ್ ಮತ್ತು ಜೀನ್ಸ್ ಧರಿಸುತ್ತಾರೆ. ಇದು ಸರ್ಕಾರಿ ನೌಕರರ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಔಪಚಾರಿಕ ಉಡುಪುಗಳನ್ನು ಧರಿಸುವುದರಿಂದ ತಮ್ಮ ಕರ್ತವ್ಯದ ಬಗ್ಗೆ ಹೆಚ್ಚು ಗಂಭೀರವಾಗಿರುವಂತೆ ಮತ್ತು ಕಚೇರಿಯ ಸಭ್ಯತೆಯನ್ನು ಸಹ ಕಾಪಾಡಬಹುದು” ಎಂದು ಅವರು ಹೇಳಿದ್ದಾರೆ.



Join Whatsapp