ಸರಕಾರವು ವಿಭಜನೆ ನಿಲ್ಲಿಸಿ, ಒಗ್ಗೂಡಿಸಲು ಪ್ರಯತ್ನ ಪಡಬೇಕು: ಗೋದ್ರೇಜ್ ಅಧ್ಯಕ್ಷ ನಾದಿರ್

Prasthutha|

ಮುಂಬೈ: ಸರಕಾರವು ದೇಶವನ್ನು ವಿಭಜಿಸುವುದನ್ನು ನಿಲ್ಲಿಸಿ, ಒಗ್ಗಟ್ಟಿನಿಂದ ದೇಶ ಮುನ್ನಡೆಸಲು ಹೆಚ್ಚು ಪ್ರಯತ್ನ ಪಡಬೇಕು ಎಂದು ಗೋದ್ರೇಜ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನಾದಿರ್ ಗೋದ್ರೆಜ್ ಹೇಳಿದ್ದಾರೆ.

- Advertisement -

ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ನಾದಿರ್, ಸರಕಾರ ದೇಶವನ್ನು ಒಗ್ಗೂಡಿಸಲು ಪ್ರಯತ್ನಿಸಬೇಕು ಮತ್ತು ದೇಶವನ್ನು ವಿಭಜಿಸುವುದನ್ನು ನಿಲ್ಲಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಆರ್ಥಿಕ ಬೆಳವಣಿಗೆಗೆ ಸರಕಾರಕ್ಕೆ ಒಗ್ಗೂಡಿಸುವ ಅಗತ್ಯತೆ ಇದೆ. ಅದರ ಬಗ್ಗೆ ಸರಕಾರ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ದ್ವೇಷದ ಅಪರಾಧಗಳು ಆರ್ಥಿಕ ಬೆಳವಣಿಗೆಯನ್ನು ಗಂಭೀರವಾಗಿ ಹಾನಿಗೊಳಿಸುತ್ತವೆ ಎಂದು 2019 ರಲ್ಲಿ ನನ್ನ ಹಿರಿಯ ಸಹೋದರ ಮತ್ತು ವ್ಯವಹಾರದ ನೇತೃತ್ವ ವಹಿಸಿದ್ದ ಪೂರ್ವಾಧಿಕಾರಿ ಆದಿಲ್ ಗೋದ್ರೇಜ್ ನನಗೆ ಎಚ್ಚರಿಕೆ ನೀಡಿದ್ದರು ಎಂದು ತಿಳಿಸಿದರು.

- Advertisement -

ನಮ್ಮ ಆಲೋಚನೆಗಳು ಮಾನವೀಯವಾಗಿರಬೇಕು ಮತ್ತು ಪಂಥೀಯವಾಗಿರಬಾರದು ಎಂದು ಹೇಳಿದ ಅವರು, ಲಾಭಗಳನ್ನು ತಲುಪುವುದು ಮಾತ್ರ ಉದ್ಯಮದ ಗುರಿಯಲ್ಲ ಎಂಬುದನ್ನು ಉದ್ಯಮಗಳು ಸಹ ಅರಿತುಕೊಳ್ಳಬೇಕು, ಒಳ್ಳೆಯದನ್ನು ಮಾಡುವ ಮೂಲಕ ಇನ್ನೊಬ್ಬರು ತಮಗಾಗಿ ಒಳ್ಳೆಯದನ್ನು ಮಾಡಬಹುದು ಎಂದು ಒತ್ತಿ ಹೇಳಿದರು.

Join Whatsapp