ಸಾಮಾಜಿಕ ಸುಭದ್ರತೆ ಒದಗಿಸಲಾಗದ ಸರಕಾರದ ನೀತಿ ಅಪಾಯಕಾರಕ: ಎಸ್.ವೈ.ಎಸ್

Prasthutha|

ಮಂಗಳೂರು: ಸಾಮಾಜಿಕ ಸುಭದ್ರತೆ ಒದಗಿಸಲಾಗದ ಸರಕಾರದ ನೀತಿ ಅಪಾಯಕಾರಕ ಎಂದು ಎಸ್.ವೈ.ಎಸ್ ದ.ಕ. ಜಿಲ್ಲಾಧ್ಯಕ್ಷರಾದ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕರಾವಳಿಯ  ಸುತ್ತಲೂ ವ್ಯಾಪಕವಾಗಿ “ಪ್ರತಿಕ್ರಿಯೆ”ಯ ಲೇಬಲಿನಲ್ಲಿ ಹರಡುತ್ತಿರುವ ದ್ವೇಷದ ಮತ್ತು ಮತಾಂಧತೆಯ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾಜಿಕ ಸುಭದ್ರತೆ ಕಾಪಾಡಬೇಕಾದ ಸರಕಾರ ಈ ಬಗ್ಗೆ ಯಾವುದೇ ರೀತಿಯ ಕ್ರಮಗಳಿಗೆ ಮುಂದಾಗದೇ ಇರುವ ಕಾರಣ ಗೂಂಡಾಗಳು ಸ್ವಚ್ಛಂದ ವಾಗಿ ತಿರುಗಾಡುವ ಹಂತ ತಲುಪಿದೆ. ಸಾರ್ವಜನಿಕರ ಮುಂದೆಯೇ  ಪೇಟೆ ಪಟ್ಟಣಗಳಲ್ಲಿ ಯಾವುದೇ ಭಯವಿಲ್ಲದೇ ಅಮಾಯಕರ ಹತ್ಯೆ ಮಾಡಲು ಅವಕಾಶ ಸಿಗುವ ಈ ನಾಡಿನಲ್ಲಿ ಜಂಗಲ್ ರಾಜ್ಯ ಜಾರಿಯಾಗಿದೆಯೇ ಎಂದು ಅನುಮಾನಿಸಬೇಕಾಗಿದೆ. ಫೈಝಲ್ ಹತ್ಯೆಯ ಬಳಿಕ ಸುಧಾರಿಸಿಕೊಳ್ಳುತ್ತಿದ್ದ ಸುರತ್ಕಲ್ ನಲ್ಲಿ ಯಾವುದೇ ರೀತಿಯ ಪ್ರಚೋದನೆಯೋ, ಕ್ಷುಲ್ಲಕ ಕಾರಣಗಳೂ ಇಲ್ಲದೇ ಮತ್ತೊಂದು ಹತ್ಯೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರ ಮತ್ತು ಜಿಲ್ಲಾಡಳಿತವು ಯಾರದೋ ಗುಂಪಿನ ಬರೀ ಒತ್ತಡಕ್ಕೆ ಮಣಿದು ಅವರ ಆಶೋತ್ತರಗಳನ್ನು ಪೂರೈಸಲು ಶ್ರಮಿಸುತ್ತಿರುವಾಗ ಸಾರ್ವಜನಿಕರ ಬದುಕಿಗೆ ಭಯದ ವಾತವರಣ ಆವರಿಸಿದೆ. ಕಿಡಿಗೇಡಿಗಳನ್ನು ನಿಯಂತ್ರಿಸುವ ಕಾರ್ಯಕ್ಕೆ ಸಂಬಂಧ ಪಟ್ಟ ಇಲಾಖೆಗಳು ಕಾರ್ಯನಿರ್ವಹಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಾಮಾಜಿಕ ಅರಾಜಕತೆಗೆ ಕಾರಣವಾಗಬಹುದೆಂದು ಅವರು ಎಚ್ಚರಿಸಿದ್ದಾರೆ.

- Advertisement -

 ಮೃತ ಜಲೀಲನ ಕುಟುಂಬಕ್ಕೆ ಸೂಕ್ತ ನ್ಯಾಯ ಮತ್ತು ಪರಿಹಾರ ನೀಡಬೇಕೆಂದು ಅಬ್ದುಲ್ ಅಝೀಝ್ ದಾರಿಮಿ ಸರಕಾರವನ್ನು ಒತ್ತಾಯಿಸಿದ್ದಾರೆ.



Join Whatsapp