ಬೆಂಗಳೂರು: ಸುಳ್ಳು ಸುದ್ದಿ ಹರಡುವುದು, ಫೋಟೊ, ವಿಡಿಯೋ ತಿರುಚಿ ಪ್ರಚರಿಸುವುದು ಸೇರಿದಂತೆ ವಿವಿಧ ರೀತಿಯ ಆನ್‌ಲೈನ್ ಪ್ರಕರಣಗಳ ಮೇಲೆ ನಿಗಾ ವಹಿಸಲು ಬಹು ಇಲಾಖೆಗಳ ಸಮನ್ವಯ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಮಿತಿಯಲ್ಲಿ, ಸಿಐಡಿ ಸೈಬರ್ ವಿಭಾಗದ (ಸಿ ಆ್ಯಂಡ್ ಎನ್) ಎಡಿಜಿಪಿ, ಗೃಹ ಇಲಾಖೆ, ಐಟಿಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆಯ ಕಾರ್ಯದರ್ಶಿ, ಮಾಹಿತಿ ಇಲಾಖೆಯ ಕಾರ್ಯದರ್ಶಿ, ಸರ್ಕಾರ ನಾಮ ನಿರ್ದೇಶನ ಮಾಡಿದ ಕಾನೂನು ಸಲಹೆಗಾರ, ಐಟಿಬಿಟಿ ಇಲಾಖೆ ಒದಗಿಸುವ ಸೇವಾದಾರರು, ಸರ್ಕಾರ ನಾಮ ನಿರ್ದೇಶನ ಮಾಡುವ ತಲಾ ಒಬ್ಬರು ಸಾರ್ವಜನಿಕ ಮತ್ತು ತಾಂತ್ರಿಕ ವಲಯದವರು ಸದಸ್ಯರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.