ತಮಿಳುನಾಡಿನಲ್ಲಿ ಆನ್ ಲೈನ್ ಜೂಜಾಟ ನಿಷೇಧಕ್ಕೆ ಸರ್ಕಾರ ಚಿಂತನೆ

Prasthutha|

ಚೆನ್ನೈ: ಆನ್ ಲೈನ್ ಜೂಜಾಟವನ್ನು ನಿಷೇಧಿಸಲು ಸರ್ಕಾರ ಬದ್ಧವಾಗಿದ್ದು, ಶೀಘ್ರವೇ ಈ ಸಂಬಂಧ ಕಾನೂನುಗಳನ್ನು ತರಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದು ತಮಿಳುನಾಡು ಸರ್ಕಾರ ಮಂಗಳವಾರ ಹೇಳಿದೆ.

- Advertisement -

ಹಲವಾರು ಕುಟುಂಬಗಳನ್ನು ನಾಶಪಡಿಸಿದ ಆನ್ ಲೈನ್ ಜೂಜಿನ ದುಷ್ಪರಿಣಾಮಗಳ ಬಗ್ಗೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ಸಂಪೂರ್ಣ ಅರಿವಿದೆ. ಹಿಂದಿನ ಎಐಎಡಿಎಂಕೆ ಸರ್ಕಾರವು “ತರಾತುರಿಯಲ್ಲಿ” ಆನ್ಲೈನ್ ಜೂಜಾಟವನ್ನು ನಿಷೇಧಿಸಲು ಸುಗ್ರೀವಾಜ್ಞೆಯನ್ನು ಪ್ರಕಟಿಸಿತ್ತು, ಮದ್ರಾಸ್ ಹೈಕೋರ್ಟ್ ಅದನ್ನು ಹೊಡೆದು ಹಾಕಿತು ಎಂದು ಕಾನೂನು ಸಚಿವ ಎಸ್ ರೇಗುಪತಿ ಹೇಳಿದ್ದಾರೆ.

“ಎಐಎಡಿಎಂಕೆ ಸರ್ಕಾರ ಜಾರಿಗೊಳಿಸಿದ ಕಾನೂನನ್ನು ಎತ್ತಿ ಹಿಡಿಯಲು ನಾವು ಸುಪ್ರೀಂ ಕೋರ್ಟ್ ಗೆ ಹೋಗಿದ್ದೇವೆ. ಆನ್ ಲೈನ್ ಜೂಜಾಟದ ಮೇಲಿನ ನಿಷೇಧವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರದ ಮೇಲ್ಮನವಿಯ ಮೇಲೆ ಸುಪ್ರೀಂ ಕೋರ್ಟ್ ಉತ್ತಮ ತೀರ್ಪು ನೀಡಲಿದೆ ಎಂದು ಆಶಿಸೋಣ,” ರೇಗುಪತಿ ವಿಧಾನಸಭೆಯಲ್ಲಿ ಹೇಳಿದರು.

Join Whatsapp