ಅಮೆರಿಕದಲ್ಲಿ ನೆಲೆಸಲು ಗ್ರೀನ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿದ ಗೋಟಬಯ ರಾಜಪಕ್ಸೆ

Prasthutha|

ಕೊಲಂಬೊ: ಶ್ರೀಲಂಕಾದಿಂದ ಪಲಾಯನಗೈದ  ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಪತ್ನಿ ಮತ್ತು ಮಗನೊಂದಿಗೆ ಅಮೆರಿಕದಲ್ಲಿ ನೆಲೆಸಲು ಯುಎಸ್ ಗ್ರೀನ್ ಕಾರ್ಡ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

- Advertisement -

ರಾಜಪಕ್ಸೆ ಅವರ ಪತ್ನಿ ಲೋಮಾ ರಾಜಪಕ್ಸೆ ಯುಎಸ್ ಪ್ರಜೆಯಾಗಿದ್ದು,  ಅರ್ಜಿ ಸಲ್ಲಿಸಲು ಅರ್ಹರಾಗಿರುವುದರಿಂದ ಗ್ರೀನ್ ಕಾರ್ಡ್ ಪಡೆಯಲು ಅವರ ವಕೀಲರು ಕಳೆದ ತಿಂಗಳು ಅರ್ಜಿ ಸಲ್ಲಿಸಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು ಉನ್ನತ ಮೂಲಗಳನ್ನು ಹೇಳಿದೆ.

2019 ರಲ್ಲಿ, ರಾಜಪಕ್ಸೆ ಅವರು 2019 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಯುಎಸ್ ಪೌರತ್ವವನ್ನು ತ್ಯಜಿಸಿದ್ದರು. ಶ್ರೀಲಂಕಾ ಸೇನೆಯಲ್ಲಿದ್ದ ರಾಜಪಕ್ಸ ಅವರು ನಿವೃತ್ತಿ ಪಡೆದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದತ್ತ ಮುಖ ಮಾಡಿ, 1998 ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ನಂತರ 2005 ರಲ್ಲಿ ಶ್ರೀಲಂಕಾಕ್ಕೆ ಮರಳಿದ್ದರು.

- Advertisement -

ಪ್ರಸ್ತುತ ಬ್ಯಾಂಕಾಕ್ ನ ಹೋಟೆಲೊಂದರಲ್ಲಿ  ತಮ್ಮ ಪತ್ನಿಯೊಂದಿಗೆ  ವಾಸ್ತವ್ಯ ಹೂಡಿರುವ ಮಾಜಿ ಅಧ್ಯಕ್ಷ ಆಗಸ್ಟ್ 25 ರಂದು ಶ್ರೀಲಂಕಾಕ್ಕೆ ಮರಳಲಿದ್ದಾರೆ, ಕನಿಷ್ಠ ನವೆಂಬರ್ ವರೆಗೆ ಥೈಲ್ಯಾಂಡ್ ನಲ್ಲಿ ಉಳಿಯುವ ಅವರ ಆರಂಭಿಕ ಯೋಜನೆಯನ್ನು ರದ್ದುಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.



Join Whatsapp