ವಾಷಿಂಗ್ಟನ್: ನೌಕರರ ಇ-ಮೇಲ್’ಗೆ ಕಂಗೆಟ್ಟ ಗೂಗಲ್ ಸಂಸ್ಥೆ ಅಮೆರಿಕದಲ್ಲಿ ವಾಸವಾಗಿರುವ ದಲಿತ ಹೋರಾಟಗಾರ್ತಿ ತೆನ್ ಮೊಳಿ ಸೌಂದರ ರಾಜನ್ ಅವರು ನೀಡಬೇಕಿದ್ದ ಜಾತಿ ಕುರಿತ ಉಪನ್ಯಾಸವನ್ನು ರದ್ದುಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಿಬ್ಬಂದಿಯನ್ನು ಸಂವೇದನೆಶೀಲರನ್ನಾಗಿಸುವ ಸಲುವಾಗಿ ಡೈವರ್ಸಿಟಿ ಈಕ್ವಿಟಿ ಇನ್ ಕ್ಲೂಸಿವಿಟಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ತೆನ್ ಮೊಳಿ ಅವರನ್ನು ಹಿಂದೂ ವಿರೋಧಿ ಎಂದು ದೂರಲಾಗಿತ್ತು ಮತ್ತು ಜೀವ ಬೆದರಿಕೆ ಒಡ್ಡುವ ಇ- ಮೇಲ್ ರವಾನಿಸಲಾಗಿತ್ತು.
ಜಾತಿ ಮತ್ತು ನ್ಯಾಯದ ಕುರಿತು ಚರ್ಚೆ ನಡೆಸುವುದು ನಮ್ಮ ಜೀವಕ್ಕೆ ತೊಂದರೆ ತಂದೊಡ್ಡಲಿದೆ ಎಂಬ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಕಂಪನಿಯ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಇದು ಗೂಗಲ್ ಸಂಸ್ಥೆಯೊಳಗೆ ಹಿಂದೂ ಪರ ಗುಂಪಿನ ಪ್ರಭಾವಕ್ಕೆ ಸಾಕ್ಷಿ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ ತೆನ್ ಮೊಳಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಹಿರಿಯ ಮ್ಯಾನೇಜರ್ ತನುಜಾ ಗುಪ್ತಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.