ರಹಸ್ಯ ಡೇಟಾ ಸಂಗ್ರಹಿಸುವ ಆ್ಯಪ್ ಗಳನ್ನುನಿಷೇಧಿಸಿದ ಗೂಗಲ್

Prasthutha|

ವಾಷಿಂಗ್ಟನ್: ಬಳಕೆದಾರರ ಫೋನ್ ಸಂಖ್ಯೆಗಳು ಮತ್ತು ಇತರ ಪ್ರಮುಖ ಡೇಟಾವನ್ನು ರಹಸ್ಯವಾಗಿ ಸಂಗ್ರಹಿಸುತ್ತಿದ್ದ ಹತ್ತಾರು ಅಪ್ಲಿಕೇಶನ್‌ ಗಳನ್ನು ಪ್ಲೇ ಸ್ಟೋರ್‌ ನಲ್ಲಿ ಗೂಗಲ್ ನಿಷೇಧಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ತಿಳಿಸಿದೆ.

- Advertisement -

ಈ ವರದಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್ ನಿಂದ ನಿಷೇಧಿಸಲಾದ ಅಪ್ಲಿಕೇಶನ್‌ಗಳು ಬಳಕೆದಾರರ ನಿಖರವಾದ ಸ್ಥಳ ಮಾಹಿತಿ, ಇಮೇಲ್ ಮತ್ತು ಫೋನ್ ಸಂಖ್ಯೆಗಳು ಮತ್ತು ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುತ್ತಿದ್ದು, ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಆ್ಯಪ್ ನಲ್ಲಿ ಡೇಟಾ-ಸ್ಕ್ರ್ಯಾಪಿಂಗ್ ಕೋಡ್ ಒಳಗೊಂಡಿರುವುದು ಕಂಡುಬಂದಿದೆ.

ನಿಷೇಧಿತ ಅಪ್ಲಿಕೇಶನ್‌ ಗಳಲ್ಲಿ 10 ಮಿಲಿಯನ್‌ ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾದ ಮುಸ್ಲಿಂ ಪ್ರಾರ್ಥನೆ ಅಪ್ಲಿಕೇಶನ್‌ಗಳು, ಬಾರ್‌ಕೋಡ್ ಸ್ಕ್ಯಾನಿಂಗ್ ಅಪ್ಲಿಕೇಶನ್ ಮತ್ತು ಹೈವೇ ಸ್ಪೀಡ್ ಟ್ರ್ಯಾಪ್ ಡಿಟೆಕ್ಷನ್ ಅಪ್ಲಿಕೇಶನ್ ಗಳು ಸೇರಿವೆ.

- Advertisement -

ಈ ನಿಷೇಧಿತ ಅಪ್ಲಿಕೇಶನ್‌ಗಳಲ್ಲಿ ಕಂಡುಬರುವ ಆಕ್ರಮಣಕಾರಿ ಕೋಡ್ ಅನ್ನು ಆಪ್‌ಸೆನ್ಸಸ್ ಎಂಬ ಸಂಸ್ಥೆಯ ಸ್ಥಾಪಕರಾದ ಸೆರ್ಜ್ ಈಗೆಲ್‌ಮನ್ ಮತ್ತು ಜೋಯಲ್ ರಿಯರ್ಡನ್ ಎಂಬ ಇಬ್ಬರು ಸಂಶೋಧಕರು ಕಂಡುಹಿಡಿದ್ದಾರೆ. ಮೊಬೈಲ್ ಆ್ಯಪ್ ಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ಪರಿಶೀಲಿಸುವ ಕೆಲಸ ಮಾಡುತ್ತಿರುವ ಇವರು 2021 ರಲ್ಲಿ ತಮ್ಮ ಸಂಶೋಧನೆಗಳೊಂದಿಗೆ ಗೂಗಲ್ ಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.



Join Whatsapp