ಆನ್’ಲೈನ್ ಬೆಟ್ಟಿಂಗ್ ಸುದ್ದಿ ಪ್ರಕಟಿಸದಂತೆ ಗೂಗಲ್’ಗೆ ಸೂಚನೆ

Prasthutha|

ನವದೆಹಲಿ: ಯಾವುದೇ ಆನ್’ಲೈನ್ ಬೆಟ್ಟಿಂಗ್ ಜಾಹೀರಾತು, ಸುದ್ದಿ ಪ್ರಕಟಿಸದಂತೆ   ಗೂಗಲ್ ವೇದಿಕೆಗೆ ಭಾರತ ಸರಕಾರದ ಸುದ್ದಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಸೂಚನೆ ನೀಡಿದೆ.

- Advertisement -

2022ರ ಜೂನ್ 13ರಂದು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅಕ್ಟೋಬರ್’ನಲ್ಲಿ ಎಲ್ಲ ಸರ್ಚ್ ಇಂಜಿನ್, ಚಾನೆಲ್’ಗಳಿಗೆ ಈ ನಿರ್ಬಂಧದ ಸುತ್ತೋಲೆ ನೀಡಲಾಗಿತ್ತು.

ಗ್ರಾಹಕ ಸಂಬಂಧಿ ಸಚಿವಾಲಯವೂ ಇಂತಹ ಬೆಟ್ಟಿಂಗ್, ಬಾಡಿಗೆ ವಸ್ತುಗಳ ಬಗೆಗಿನ ಸ್ವ ಇಲ್ಲವೇ ಜಾಲತಾಣ ಜಾಹೀರಾತುಗಳನ್ನು ನಿರ್ಬಂಧಿಸುವಂತೆ ಸೂಚಿಸಿತ್ತು.

- Advertisement -

ಇವೆಲ್ಲ ತಪ್ಪು ದಾರಿಗೆಳೆಯುವ ಜಾಹೀರಾತುಗಳಾಗಿದ್ದು ಗ್ರಾಹಕ ರಕ್ಷಕ ಕಾಯ್ದೆಗಳಿಗೆ ವಿರೋಧವಾಗಿವೆ. ಇವು ಬಾಡಿಗೆ ಮಾದರಿಯಲ್ಲಿ ವಸ್ತುಗಳನ್ನು ಪ್ರಾಯೋಜಿಸುವ ಒಳ ತಂತ್ರದ ಜಾಹೀರಾತುಗಳಾಗಿವೆ.

ಇದನ್ನು ಸ್ವಾಗತಿಸಿರುವ ಅಖಿಲ ಭಾರತ ಗೇಮಿಂಗ್ ಫೆಡರೇಶನ್, ಇವೆಲ್ಲ ಜೂಜು ಮಾದರಿಯ ಜಾಹೀರಾತುಗಳು ಎಂದು ಹೇಳಿವೆ. “ಸುದ್ದಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಸೂಚನೆ ಮೇಲೆ ಟೀವಿ ಚಾನೆಲ್’ಗಳು ಮತ್ತು ಓಟಿಟಿ ವೇದಿಕೆಗಳಲ್ಲಿ ಈ ಬಗೆಯ ಜಾಹೀರಾತುಗಳು ನಿಂತು ಹೋಗಿವೆ ಇಲ್ಲವೇ ತೀರಾ ಕಡಿಮೆಯಾಗಿವೆ. ಸಾಮಾಜಿಕ ವೇದಿಕೆಗಳನ್ನು ಈ ರೀತಿ ಸಮಾಜದ್ರೋಹಿ ವಿಧಾನದಲ್ಲಿ ಬಳಸಲು ಅವಕಾಶವಿರಬಾರದು. ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. 

“ಈ ಜಾಲತಾಣಗಳು ತಮ್ಮ ಕಾನೂನು ಬಾಹಿರ ವಸ್ತುಗಳನ್ನು ಕೆಟ್ಟ ರೀತಿಯಲ್ಲಿ ಪ್ರಾಯೋಜಿಸುತ್ತವೆ. ಇವು ನಿಯಮ ಬಾಹಿರವಾಗಿ ತಪ್ಪು ದಾರಿಯ ಜಾಹೀರಾತುಗಳನ್ನು ಮತ್ತು ಅನುಮತಿಯಿಲ್ಲದೆ ಕ್ರೀಡೆಗಳನ್ನು ಚಾನೆಲ್ ಮತ್ತು ಓಟಿಟಿ ಮೂಲಕ ತೋರಿಸುತ್ತಿರುತ್ತವೆ. ಅಲ್ಲದೆ ಅವು ಓಓಎಚ್ ಡಿಜಿಟಲ್ ಪ್ರಿಂಟ್ ಮಾಧ್ಯಮಕ್ಕೂ ಪ್ರಾಯೋಜಕವಾಗಿವೆ.  ಕಳಪೆ ವಸ್ತುಗಳನ್ನು ಆಟೋಟ, ಮನೋರಂಜನೆಯ ನಡುವೆ ತೂರಿಸಿ ಗ್ರಾಹಕರನ್ನು ದಾರಿ ತಪ್ಪಿಸಲಾಗುತ್ತಿದೆ” ಎಂದು ಅಖಿಲ ಭಾರತ ಗೇಮಿಂಗ್ ಫೆಡರೇಶನ್ ನ ಸಿಇಓ ರೋಲಾಂಡ್ ಲ್ಯಾಂಡರ್ಸ್ ಹೇಳಿದರು.

ಕಾನೂನು ಬಾಹಿರ ಆಫ್  ಶೋರ್ ಜೂಜಿನ ವೆಬ್’ಸೈಟ್ ಗಳ ಮೇಲೆ ರೂ. 3,500 ಕೋಟಿ ಹೂಡಿಕೆ ಆಗಿರುವುದಾಗಿ ತಿಳಿದು ಬಂದಿದೆ. ಪ್ರಾಯೋಜಕರು ಮತ್ತು ವಶೀಲಿಬಾಜಿಯನ್ನೂ ಸೇರಿಸಿದರೆ ಇದರಲ್ಲಿ 5,000 ಕೋಟಿ ರೂಪಾಯಿ ಹೂಡಿಕೆಯಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಎಐಜಿಎಫ್ ಅಖಿಲ ಭಾರತ ಗೇಮಿಂಗ್ ಫೆಡರೇಶನ್ ಆನ್ ಲೈನ್ ಗೇಮಿಂಗ್ ನ ಸರ್ವೋಚ್ಚ ಸಂಸ್ಥೆಯಾಗಿದೆ. ಇ ಸ್ಪೋರ್ಟ್ಸ್, ಫ್ಯಾಂಟಸಿ ಗೇಮಿಂಗ್, ಕಾರ್ಡ್ ಗೇಮುಗಳು, ಕ್ಯಾಶುವಲ್ ಗೇಮಿಂಗ್ ಎಂದು 100 ಕಂಪೆನಿಗಳು ಇದರಲ್ಲಿ ಈಡುಗೊಂಡಿವೆ. ಇತರ ರೂಪದ  ಸಂಸ್ಥೆಗಳದಕ್ಕೂ ಸೇರಿ ಇವಕ್ಕೆ 40 ಕೋಟಿ ಬಳಕೆದಾರರು ಇದ್ದಾರೆ.

Join Whatsapp