ಜೈಪುರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು: ಏಳು ರೈಲುಗಳ ಸಂಚಾರ ಸ್ಥಗಿತ

Prasthutha|

ಜೈಪುರ: ಗೂಡ್ಸ್ ರೈಲಿನ ಎರಡು ಬೋಗಿಗಳು ಶನಿವಾರ ಬೆಳಗ್ಗೆ ಹಳಿ ತಪ್ಪಿದ ಪರಿಣಾಮ ಏಳು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಜೈಪುರ–ಮದರ್ ರೈಲ್ವೆ ವಿಭಾಗದ ಅಸಲ್ಪುರ ಜೊಬನಾರ್ ಮತ್ತು ಹಿರ್ನೋಡ ನಿಲ್ದಾಣಗಳ ನಡುವೆ ಈ ಘಟನೆ ವರದಿಯಾಗಿದೆ.

ಬೋಗಿಗಳನ್ನು ಹೊರತೆಗೆದು, ಹಳಿಗಳನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಹೀಗಾಗಿ ನೈಋತ್ಯ ರೈಲ್ವೆಯು ಜೈಪುರ–ಮರ್ವಾರ್, ಜೈಪುರ–ಜೋಧಪುರ, ಜೈಪುರ–ಅಜ್ಮೀರ್ ಹಾಗೂ ಜೈಪುರ–ಸೂರತ್ಗಢ ಮಾರ್ಗವಾಗಿ ಸಂಚರಿಸುವ ಒಟ್ಟು ಏಳು ರೈಲುಗಳ ಸಂಚಾರವನ್ನು ಶನಿವಾರ ಸ್ಥಗಿತಗೊಳಿದೆ.