ಬೆಂಗಳೂರು: ರೈತ ಸಂಘಟನೆಗಳ ಆಗ್ರಹವನ್ನು ಪರಿಗಣಿಸಿರುವ ಸರ್ಕಾರ 31 ಜಿಲ್ಲೆಗಳ ಬೆಳೆ ನಷ್ಟ ಆಧರಿಸಿ 2023-24 ನೇ ಸಾಲಿನ ಬರ ಪರಿಹಾರಕ್ಕಾಗಿ ಎಸ್ಡಿಆರ್ಎಫ್ ಅಡಿ ಇಂದು 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಮುಂಗಾರು ವೈಫಲ್ಯದಿಂದ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಕೆಲವು ರೈತರು ಬೆಳೆದಿದ್ದರೂ ನೀರಿನ ಕೊರತೆಯಿಂದ ಬೆಳೆ ಒಣಗಿ ಹೋಗಿದ್ದವು. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.ಅದರಂತೆ ರಾಜ್ಯದಲ್ಲಿನ ಮುಂಗಾರು ಹಂಗಾಮಿನ ಬರ ಪರಿಹಾರ ಕಾರ್ಯಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿ 31 ಜಿಲ್ಲೆಗಳಿಗೂ 324 ಕೋಟಿ ರೂ. ಬೆಳೆ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.