ವಾಷಿಂಗ್ಟನ್: ಒಂದು ಕಾಲದಲ್ಲಿ ಅತೀ ಹೆಚ್ಚು ಬಳಕೆಯಲ್ಲಿದ್ದ ಇಂಟರ್‌ನೆಟ್ ಎಕ್ಸ್ ಪ್ಲೋರರ್ ತನ್ನ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ತಿಳಿಸಿದೆ .
1995ರಲ್ಲಿ ಕಂಪ್ಯೂಟರ್‌ಗಳಿಗೆ ಹೆಜ್ಜೆ ಇಟ್ಟಿದ್ದ ಎಕ್ಸ್ ಪ್ಲೋರರ್ 2003 ರ ಹೊತ್ತಿಗೆ ಭಾರೀ ಪ್ರಸಿದ್ಧವಾಗಿತ್ತು. ವಿಶ್ವದ ಶೇ.95 ಕಂಪ್ಯೂಟರ್‌ಗಳಲ್ಲಿ ಎಕ್ಸ್‌ಪ್ಲೋರರ್ ಬಳಕೆಯಲ್ಲಿತ್ತು.
ಆದರೆ ನಂತರದ ದಿನಗಳಲ್ಲಿ ಬೇರೆ ಬೇರೆ ಬ್ರೌಸರ್‌ಗಳ ಆವಿಷ್ಕರಣೆಯಿಂದಾಗಿ ಇಂಟರ್‌ನೆಟ್ ಎಕ್ಸ್ ಪ್ಲೋರರ್ ನ ಬಳಕೆ ಕಡಿಮೆಯಾಗಲಾರಂಭಿಸಿತು. ಮೈಕ್ರೋಸಾಫ್ಟ್ ಸಂಸ್ಥೆ ಹೊಸದಾಗಿ ಎಡ್ಜ್ ಬ್ರೌಸರ್ ಆರಂಭಿಸಿದ ಹಿನ್ನೆಲೆ 2016ರಿಂದ ಎಕ್ಸ್ ಪ್ಲೋರರ್ ಗೆ ಅಪ್‌ಡೇಟ್‌ಗಳನ್ನು ನಿಲ್ಲಿಸಿತ್ತು.
ಇದೀಗ ಎಕ್ಸ್ ಪ್ಲೋರರ್ ನ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ಎಡ್ಜ್ ಬ್ರೌಸರ್ ಎಕ್ಸ್ ಪ್ಲೋರರ್ ಗಿಂತ ವೇಗದ ಬ್ರೌಸರ್ ಆಗಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಹೇಳಿಕೊಂಡಿದೆ.