ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ನಂತರ ಚಿನ್ನದ ಬೆಲೆಗಳು ಕುಸಿಯುತ್ತಲೇ ಇವೆ. ಗುರುವಾರ ಎಂಸಿಎಕ್ಸ್ ನಲ್ಲಿ ಚಿನ್ನದ ಡಿಸೆಂಬರ್ ಭವಿಷ್ಯದ ಒಪ್ಪಂದಗಳು( ಅಂದರೆ Future) ಶೇಕಡಾ 0.37 ರಷ್ಟು ಕುಸಿತದೊಂದಿಗೆ 10 ಗ್ರಾಂಗೆ ₹ 76,369 ಕ್ಕೆ ಪ್ರಾರಂಭವಾದರೆ, ಬೆಳ್ಳಿ ಡಿಸೆಂಬರ್ ಭವಿಷ್ಯದ ಒಪ್ಪಂದಗಳ ಅನ್ವಯ ಶೇಕಡಾ 0.24 ರಷ್ಟು ವಹಿವಾಟು ನಡೆಸುತ್ತಿವೆ.
ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹ 2,100 ಮತ್ತು ಬೆಳ್ಳಿ ಬೆಲೆ ಕೆ.ಜಿಗೆ ₹ 4,050 ಇಳಿಕೆಯಾಗಿದೆ.
ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಸಿಯೇಷನ್ ಲಿಮಿಟೆಡ್ (IBJA) ಪ್ರಕಾರ, 24-ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹ 76,570, 22-ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹ 74,720, 20 -ಕ್ಯಾರೆಟ್ ಚಿನ್ನದ ಬೆಲೆ ₹ 10 ಗ್ರಾಂಗೆ 68,130 ಮತ್ತು 18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹ 62,201 ಆಗಿದೆ.
ಅಮೆರಿಕ ಅಧ್ಯಕ್ಷೀಯ ರೇಸ್ ನಲ್ಲಿ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದರಿಂದ ಚಿನ್ನ ಮತ್ತು ಇತರ ಹೆಚ್ಚಿನ ಸರಕುಗಳು ಋಣಾತ್ಮಕ ಪ್ರದೇಶದಲ್ಲಿ ವಹಿವಾಟು ನಡೆಸುತ್ತಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಅಮೆರಿಕ ಚುನಾವಣಾ ಫಲಿತಾಂಶವು ಡಾಲರ್ ಸೂಚ್ಯಂಕವನ್ನು 105 ಕ್ಕೆ ಏರಿಸಿದ ಕಾರಣ, ಚಿನ್ನದ ಬೆಲೆಗಳು ತೀವ್ರ ಚಂಚಲತೆಯನ್ನು ಅನುಭವಿಸಿದವು. ಪ್ರತಿ 10 ಗ್ರಾಂಗೆ ₹ 78,500 ಮತ್ತು ₹ 77,500 ರ ನಡುವೆ ತೀವ್ರವಾಗಿ ಏರಿಳಿತಗೊಂಡವು. ಈ ಡಾಲರ್ ಶಕ್ತಿಯು ಚಿನ್ನವನ್ನು 10 ಗ್ರಾಂಗೆ ₹ 77,500 ಮತ್ತು ಡಾಲರ್ ಮೌಲ್ಯದಲ್ಲಿ $ 2,700 ಗೆ ತಳ್ಳಿತು” ಎಂದು ಆರ್ಥಿಕ ತಜ್ಞರೊಬ್ಬರು ಹೇಳಿದ್ದಾರೆ.