ಕೈರಂಗಳ: ಅಪರಿಚಿತ ವ್ಯಕ್ತಿಯನ್ನು ಶುಶ್ರೂಷಿಸಿ ಆಸ್ಪತ್ರೆಗೆ ದಾಖಲಿಸಿದ ಮುಸ್ಲಿಮ್ ಯುವಕರು

Prasthutha|

►ಯುವಕರ ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

- Advertisement -

ಕೈರಂಗಳ: ಅಪರಿಚಿತ ವ್ಯಕ್ತಿಯೋರ್ವರು ಇಲ್ಲಿನ ಶಾಲೆಯ ಬಳಿ ತೀವ್ರ ಬಳಲಿಕೆಯಿಂದ ಕಂಡು ಬಂದಿದ್ದು, ಸ್ಥಳೀಯ ಮುಸ್ಲಿಮ್ ಯುವಕರು ಅವರನ್ನು ಶುಶ್ರೂಷಿಸಿ ಆಸ್ಪತ್ರೆಗೆ ದಾಖಲಿಸಿ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

75 ವರ್ಷ ರೋಬರ್ಟ್ ಡಿಸೋಜ ಎಂಬ ಅಪರಿಚಿತ ವ್ಯಕ್ತಿಯು ಕೈರಂಗಳ ಶಾಲಾ ಬಳಿ ತೀವ್ರ ಬಳಲಿಕೆಯಿಂದ ಕಂಡು ಬಂದಿದ್ದಾರೆ. ಈ ಸ್ಥಿತಿಯನ್ನು ಕಂಡ ಸ್ಥಳೀಯ ಫ್ಯಾನ್ಸಿ ಮಾಲಕರಾದ ಅಬ್ಬು ಎಂಬವರು ಕುಡಿಯಲು ನೀರು, ಆಹಾರ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಮತ್ತೆ ಊರಿನ ಮುಸ್ಲಿಂ ಯುವಕರು ಸೇರಿಕೊಂಡು ಶುಶ್ರೂಷಿಸಿದ್ದಾರೆ.

- Advertisement -

ವ್ಯಕ್ತಿಯ ಕಾಲಿನಲ್ಲಿದ್ದ ಗಾಯಕ್ಕೆ ತನ್ನ ಕೈಯಿಂದಲೇ ಮುಲಾಮು ಹಚ್ಚಿ,ಸ್ನಾನ ಮಾಡಿಸಿ ಸತ್ತಾರ್ ಕೈರಂಗಳ ಎಂಬ ಯುವಕ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ವೇಳೆ ಪಂಚಾಯತ್ ಸದಸ್ಯರಾದ ರಹಿಮಾನ್ ತೋಟಾಲ್, ಟಿಕೆ ಸಫ್ವಾನ್ ಶರೀಫ್ ಮೊದಲಾದವರು ಸಾಥ್ ನೀಡಿದರು.

ಸ್ಥಳೀಯ ಸಮಾಜಸೇವಕರಾದ ಬಾನೋಟ್ ಮೊಯ್ದಿನ್ ರವರು ಬಳಲಿದ್ದ ವ್ಯಕ್ತಿಗೆ ಕೈತುತ್ತು ನೀಡಿದ್ದಾರೆ. ಕೊನೆಗೆ ಯುವಕರು ಸೇರಿ ಆ ವ್ಯಕ್ತಿಯನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.



Join Whatsapp