ಬಿಜೆಪಿ ನಾಯಕ ಕಪಿಲ್ ಮಿಶ್ರ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮತ್ತೆ ಮೊಳಗಿದ “ಗೋಲಿ ಮಾರೋ” ಘೋಷಣೆ

Prasthutha|

ನವದೆಹಲಿ: ಬಿಜೆಪಿ ನಾಯಕ ಕಪಿಲ್ ಮಿಶ್ರ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅಮಿತ್ ಹಿಂದೂ ಎಂಬ ಸಂಘಪರಿವಾರದ ಕಾರ್ಯಕರ್ತನೊಬ್ಬ, “ಹಿಂದೂ ದ್ರೋಹಿಗಳನ್ನು ಶೂಟ್ ಮಾಡಿ”ಎಂಬ ಪ್ರಚೋದನಾಕಾರಿ ಘೋಷಣೆ ಕೂಗಿರುವ ಘಟನೆ ಗುರ್ವಾಂವ್ ನಲ್ಲಿ ನಡೆದಿದೆ.

- Advertisement -


ಈ ವರ್ಷ ದೆಹಲಿಯಲ್ಲಿ ನಡೆದ ಕೋಮುಗಲಭೆಯ ಪ್ರಚೋದಕ ಎಂದು ಆರೋಪಿಸಲಾಗಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ‘ಗೋಲಿ ಮಾರೋ (ಗುಂಡು ಹೊಡೆಯಿರಿ) ಎಂಬ ಘೋಷಣೆಗಳು ಮತ್ತೆ ಮೊಳಗಿವೆ. ಪ್ರತಿ ಶುಕ್ರವಾರ ನಮಾಜ್ ನಡೆಯುತ್ತಿದ್ದ ಗುರ್ಗಾಂವ್ನ ಸೆಕ್ಟರ್ 12 ಎ ಪ್ರದೇಶದಲ್ಲಿ ಬಿಜೆಪಿ ಬೆಂಬಲಿತ ಕೋಮು ಆಧಾರಿತ ಸಂಘಟನೆ ಆಯೋಜಿಸಿದ್ದ ಗೋವರ್ಧನ ಪೂಜೆಯಲ್ಲಿ ಅವರು ಶುಕ್ರವಾರ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿ ‘ಗೋಲಿ ಮಾರೋ’ ಘೋಷಣೆಗಳನ್ನು ಕೂಗಲಾಗಿದೆ.


ಗುರುಗಾಂವ್ ನ ಸೆಕ್ಟರ್ 12ಎ ಸೈಟ್ ನಲ್ಲಿ ಪ್ರತಿ ಶುಕ್ರವಾರ ನಮಾಜ್ ಅನ್ನು ನಿರ್ವಹಿಸಲಾಗುತ್ತಿತ್ತು. ಆದರೆ ಇದಕ್ಕೆ ಬಿಜೆಪಿ ಬೆಂಬಲಿತ ಕೋಮು ಆಧಾರಿತ ಸಂಘಟನೆಗಳು ಕಳೆದ ಎರಡು ವಾರಗಳಿಂದ ವಿರೋಧ ವ್ಯಕ್ತಪಡಿಸಿ, ನಮಾಜ್ಗೆ ಅಡ್ಡಿಪಡಿಸಿವೆ. ಕಳೆದ ತಿಂಗಳ ಕೊನೆಯಲ್ಲಿ, 26 ಜನರ ಬಿಜೆಪಿ ಬೆಂಬಲಿತ ಗುಂಪು ನಮಾಜ್ ಮಾಡುವುದನ್ನು ಅಡ್ಡಿ ಪಡಿಸಿದ್ದಕ್ಕಾಗಿ ಬಂಧಿಸಲಾಗಿತ್ತು.

- Advertisement -


ಕಳೆದು ವರ್ಷ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ಕಪಿಲ್ ಮಿಶ್ರಾ ನಡೆಸುತ್ತಿದ್ದ ಜಾಥಾದಲ್ಲಿ ಕೂಡಾ ‘ಗೋಲಿ ಮಾರೊ’ ಘೋಷಣೆಗಳು ಕೂಗಲಾಗಿತ್ತು. ಇದರ ನಂತರ ಅಲ್ಲಿ ಕೋಮುಗಲಭೆ ನಡೆದು ಐವತ್ತಕ್ಕೂ ಹೆಚ್ಚು ಜನರು ಸಾವನಪ್ಪಿದ್ದರು ಹಾಗೂ ಸಾವಿರಾರು ಜನರು ಗಾಯಗೊಂಡು ಕೋಟ್ಯಂತರ ರುಪಾಯಿಗಳ ಆಸ್ತಿಪಾಸ್ತಿ ನಷ್ಟವಾಗಿದ್ದವು.

Join Whatsapp