ದೀಪಾವಳಿ ದಿನದಂದು ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ..!

Prasthutha|

ಬೆಂಗಳೂರು: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ದೀಪಾವಳಿಯ ಈ ದಿನದಂದೂ ಏರಿಕೆಯಾಗಿದೆ.

- Advertisement -


ಬುಧವಾರ 10 ಗ್ರಾಂ ಚಿನ್ನದ ಬೆಲೆ ರೂ.81,870ಕ್ಕೆ ಏರಿಕೆಯಾಗಿದ್ದು, ಗುರುವಾರ ಸುಮಾರು 270 ರೂಗಳಷ್ಟು ಏರಿಕೆಯಾಗಿ ರೂ.82,140ಕ್ಕೆ ತಲುಪಿದೆ. ಬುಧವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ ರೂ.1,00,985 ರಷ್ಟಿದ್ದರೆ, ಗುರುವಾರದ ವೇಳೆಗೆ ರೂ.1,445 ಇಳಿಕೆಯಾಗಿ ರೂ.99,540ಕ್ಕೆ ತಲುಪಿದೆ.


• ಬೆಂಗಳೂರು: ಇಂದಿನ ಚಿಲ್ಲರೆ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ ₹ 7,441 ರೂ ಇದ್ದರೆ 10 ಗ್ರಾಂ ಆಭರಣ ಚಿನ್ನದ ಬೆಲೆ 74,410 ರೂ. ಇದೆ.

- Advertisement -


• ಇನ್ನು 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ ₹ 8,117 ಇದ್ದರೆ, 10 ಗ್ರಾಂ ಬಂಗಾರಕ್ಕೆ 81,170 ರೂ ಇದೆ.


ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಹೆಚ್ಚಾಗಿದೆ. ಬುಧವಾರ ಒಂದು ಔನ್ಸ್ ಚಿನ್ನದ ಬೆಲೆ 2780 ಡಾಲರ್ ಇತ್ತು, ಆದರೆ ಗುರುವಾರದ ವೇಳೆಗೆ 6 ಡಾಲರ್ ಇಳಿಕೆಯಾಗಿ 2786 ಡಾಲರ್ ಗೆ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 33.67 ಡಾಲರ್ ಆಗಿದೆ.




Join Whatsapp