ಚಿನ್ನದ ಬೆಲೆ ಏರಿಕೆ: ಇಲ್ಲಿದೆ ದರಪಟ್ಟಿ

Prasthutha|

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಎರಡೂ ಕೂಡ ಇಂದು ಶುಕ್ರವಾರ ಏರಿಕೆ ಕಂಡಿವೆ. ನಿನ್ನೆ ಇವೆರಡೂ ಲೋಹಗಳ ಬೆಲೆ ಭಾರತದಲ್ಲಿ ವ್ಯತ್ಯಯ ಕಂಡಿರಲಿಲ್ಲ. ಇವತ್ತು ಆಭರಣ ಚಿನ್ನದ ಬೆಲೆ ಗ್ರಾಮ್ ​ಗೆ 30 ರೂ ಏರಿದರೆ, ಅಪರಂಜಿ ಚಿನ್ನದ ಬೆಲೆ 33 ರೂನಷ್ಟು ಹೆಚ್ಚಳವಾಗಿದೆ.

- Advertisement -

ಬೆಳ್ಳಿ ಬೆಲೆ ಒಂದು ವಾರದ ಬಳಿಕ ಮೊದಲ ಬಾರಿಗೆ ಹೆಚ್ಚಳ ಆಗಿದೆ. ಇಂದು ಗ್ರಾಮ್ ​ಗೆ 1 ರೂನಷ್ಟು ಬೆಲೆ ಏರಿಕೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ ನ 22 ಕ್ಯಾರಟ್ ಚಿನ್ನದ ಬೆಲೆ 75,550 ರುಪಾಯಿ ಇದೆ. 24 ಕ್ಯಾರಟ್​ ನ ಅಪರಂಜಿ ಚಿನ್ನದ ಬೆಲೆ 82,420 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,750 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 75,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ ​ಗೆ 9,750 ರುಪಾಯಿಯಲ್ಲಿ ಇದೆ.

- Advertisement -

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್ ​ನ 10 ಗ್ರಾಂ ಚಿನ್ನದ ಬೆಲೆ: 75,550 ರೂ
24 ಕ್ಯಾರಟ್ ​ನ 10 ಗ್ರಾಂ ಚಿನ್ನದ ಬೆಲೆ: 82,420 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 975 ರೂ



Join Whatsapp