ಪ್ಯಾರಾಲಂಪಿಕ್ಸ್: ಶೂಟಿಂಗ್ ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ

Prasthutha|

ಟೋಕಿಯೋ: ಪ್ಯಾರಾಲಂಪಿಕ್ಸ್ ಮಹಿಳಾ ವಿಭಾಗದ 100 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತದ ಅವನಿ ಲೇಖರಾ ಚಿನ್ನದ ಪದಕ ಗೆದ್ದಿದ್ದಾರೆ.

- Advertisement -

ಅವನಿ ಲೇಖರಾ 100ಮೀಟರ್ ಏರ್ ರೈಫಲ್ ಶೂಟಿಂಗ್ ಫೈನಲ್ ನಲ್ಲಿ 249.6 ಅಂಕಗಳೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಅವನಿ ಲೇಖರಾ ಈ ಮೊದಲು 617.7 ಅಂಕಗಳೊಂದಿಗೆ 7ನೇ ಸ್ಪರ್ಧಿಯಾಗಿ ಫೈನಲ್ ಗೆ ಲಗ್ಗೆ ಇಟ್ಟಿದ್ದರು. ಇವರ ಚಿನ್ನದ ಪದಕದೊಂದಿಗೆ ಭಾರತ ಈ ವರೆಗೆ 1 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕದೊಂದಿಗೆ ಒಟ್ಟು 4 ಪದಕ ಗೆದ್ದಂತಾಗಿದೆ.

Join Whatsapp