ಚಿನ್ನದ ಸರ ಸುಲಿಗೆ ಪ್ರಕರಣ| ಪೊಲೀಸ್ ಪೇದೆ ನಿರ್ದೋಷಿ

Prasthutha|

ಮಂಗಳೂರು: ಚಿನ್ನದ ಸರ ಸುಲಿಗೆ ಪ್ರಕರಣದಲ್ಲಿ ಬೆಂಗಳೂರಿನ ಮಾಹಾಲಕ್ಷಿ ಲೇ ಔಟ್ ಪೊಲೀಸ್ ಠಾಣೆಯ ಪೇದೆ ಸಂದೇಶ್ ನಿರ್ದೋಷಿ ಎಂದು 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ತೀರ್ಪು ನೀಡಿದ್ದಾರೆ.

- Advertisement -

2016ರ ಏಪ್ರಿಲ್ 12ರಂದು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಲ್ಲಾಳ್ ಭಾಗ್ ಲೋಬೋ ಕಂಪೌಂಡ್ ಸಮೀಪ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ ಮಾಡಿ ದೂಡಿ ಹಾಕಿ ಗಾಯಗೊಳಿಸಿರುವುದಾಗಿ ಪೊಲೀಸ್ ಪೇದೆ ಸಂದೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.

KSRTC ಬಸ್ ನಿಲ್ದಾಣದ ಬಳಿ ಶ್ರೀ ದೇವಿ ಕಾಲೇಜು ಕಡೆಗೆ ಬರುವ ವೇಳೆ ಕುಡಿಯಲು ನೀರು ಕೇಳಿ ಫೋನ್ ನಂಬ್ರ ಕೇಳುವ ನೇಪದಲ್ಲಿ ಕುತ್ತಿಗೆಯಿಂದ ಚಿನ್ನದ ರೋಪ್ ಸರವನ್ನು ಸುಲಿಗೆ ಮಾಡಿ ನಂತರ ತನ್ನನ್ನು ದೂಡಿ ಹಾಕಿ ಗಾಯಗೊಳಿಸಿರುವುದಾಗಿ ಶ್ರೀಮತಿ ಮಾಲಿನಿ ಶೆಟ್ಟಿ ಎಂಬವರು ದೂರು ನೀಡಿದ್ದರು.   

- Advertisement -

ಪ್ರಕರಣವನ್ನು ವಿಚಾರಣೆ ನಡೆಸಿದ 6 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕಾಂತರಾಜು ಎಸ್.ವಿ ರವರು ಆರೋಪಿ ಪೊಲೀಸ್ ಪೇದೆ ಸಂದೇಶ್ ರವರನ್ನು ನಿರ್ದೋಷಿ ಎಂದು ತೀರ್ಪು ನೀಡಿದ್ದಾರೆ.

ಆರೋಪಿಯ ಪರವಾಗಿ ಮಂಗಳೂರಿನ  ವಕೀಲರಾದ ಶ್ರೀ ಜಗದೀಶ್ ಕೆ.ಆರ್ ಮತ್ತು ಶ್ರೀ ಪ್ರಸಾದ್ ಪಾಲನ್  ರವರು ವಾದ ಮಂಡಿಸಿದ್ದರು.



Join Whatsapp