ಮಂಗಳೂರು ಯೇನೆಪೋಯಾ ಆಸ್ಪತ್ರೆಯಲ್ಲಿ ಕೋವಿಡ್ ಮೃತದೇಹದ ಮೇಲಿದ್ದ ಚಿನ್ನದ ಸರ ನಾಪತ್ತೆ !

Prasthutha|

ಮಂಗಳೂರು : ದೇರಳಕಟ್ಟೆಯ ಯೇನೆಪೋಯಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆಂದು ದಾಖಲಾಗಿದ್ದ ಕರೋಪಾಡಿಯ ಫಾತಿಮತ್ ಝುಬೈದಾ (34) ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಯಾರೋ ಕಳವುಗೈದಿದ್ದಾರೆಂದು ಮಹಿಳೆಯ ಕುಟುಂಬಿಕರು ಆರೋಪಿಸಿದ್ದಾರೆ.

ಕೋವಿಡ್ ಸೋಂಕಿಗೊಳಗಾಗಿದ್ದ ಅವರು ಇಂದು ಬೆಳಗ್ಗೆ ತೀವ್ರ ಚಿಂತಾಜನಕ ಪರಿಸ್ಥಿತಿಯಲ್ಲಿದ್ದರು. ಹಾಗಾಗಿ ಅವರನ್ನು ದೇರಳಕಟ್ಟೆಯ ಯೇನೆಪೋಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದರು ಎನ್ನಲಾಗಿದೆ. ಆ ಬಳಿಕ ಮೃತದೇಹದ ಅಂತ್ಯಸಂಸ್ಕಾರದ ವಿಧಿ ವಿಧಾನಗಳಿಗಾಗಿ ಉಳ್ಳಾಲದ ದರ್ಗಾ ಮಸೀದಿಗೆ ತರಲಾಗಿತ್ತು. ಅಲ್ಲಿ ಕುಟುಂಬಿಕರು ಚಿನ್ನದ ಸರ ಕಳವಾಗಿರುವ ಕುರಿತು ಗಮನಿದ್ದಾರೆ. ಮಹಿಳೆ ಕಿವಿಯೋಲೆ ಕೂಡಾ ಧರಿಸಿದ್ದು, ಅದು ಮಾತ್ರ ಸ್ವಸ್ಥಾನದಲ್ಲಿದೆ ಎಂದು ಕುಟುಂಬಿಕರು ಮಾಹಿತಿ ನೀಡಿದ್ದಾರೆ.

- Advertisement -

ಸುಮಾರು 1 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚಿನ್ನದ ಸರ ಕಳವಾಗಿರುವ ಕುರಿತು ಕುಟುಂಬಿಕರು ಆಸ್ಪತ್ರೆಗೆ ಫೋನಾಯಿಸಿ ಮಾಹಿತಿ ನೀಡಿದ್ದು, ಆಡಳಿತ ಮಂಡಳಿ ಆಸ್ಪತ್ರೆಯ ಸಿಸಿಟಿವಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

- Advertisement -