“ಚಿನ್ನದ ಹುಡುಗ” ನೀರಜ್ ಚೋಪ್ರಾಗೆ ‘ಪರಮ್ ವಿಶಿಷ್ಟ ಸೇವಾ’ ಪ್ರಶಸ್ತಿ

Prasthutha|

ನವದೆಹಲಿ: “ಚಿನ್ನದ ಹುಡುಗ” ನೀರಜ್ ಚೋಪ್ರಾ ಪರಮ ವಿಶಿಷ್ಟ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್’ನ ಚಿನ್ನದ ಪದಕ ವಿಜೇತ, 4 ರಜಪೂತನ ರೈಫಲ್ಸ್’ನ ಸುಬೇದಾರ್ ನೀರಜ್ ಚೋಪ್ರಾರಿಗೆ ಗಣರಾಜ್ಯೋತ್ಸವ ದಿನದಂದು ಪರಮ ವಿಶಿಷ್ಟ ಸೇವಾ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ANI ಸುದ್ದಿ‌ಸಂಸ್ಥೆ ಟ್ವೀಟ್ ಮಾಡಿದೆ.

- Advertisement -

73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀರಜ್ ಚೋಪ್ರಾ ಸೇರಿದಂತೆ ಒಟ್ಟು 384 ಜನರಿಗೆ ಶೌರ್ಯ ಪ್ರಶಸ್ತಿಗಳನ್ನ ಘೋಷಿಸಲಾಗಿದೆ.

12 ಶೌರ್ಯ ಚಕ್ರ, 29 ಪರಮ್ ವಿಶಿಷ್ಟ್ ಸೇವಾ ಪದಕ, 4 ಉತ್ತಮ್ ಯುದ್ಧ್ ಸೇವಾ ಪದಕ, 53 ವಿಶಿಷ್ಟ ಸೇವಾ ಪದಕ, 13 ಯುಧ್ ಸೇವಾ ಪದಕಗಳು ಇದರಲ್ಲಿ ಸೇರಿವೆ. ಇದಲ್ಲದೆ, 122 ವಿಶಿಷ್ಟ ಸೇವಾ ಪದಕ 81 ಸೇನಾ ಪದಕ (ಶೌರ್ಯ), 2 ವಾಯು ಸೇನಾ ಪದಕ, 40 ಸೇನಾ ಪದಕಗಳು, 8 ನೌಕಾ ಪದಕ, 14 ವಾಯು ಸೇನಾ ಪದಕಗಳು (ಕರ್ತವ್ಯನಿಷ್ಠೆ) ಒಳಗೊಂಡಿದೆ.



Join Whatsapp