ಗೋಡ್ಸೆ ಉತ್ಸವ ಮಾಡುವವರಿಂದ ಗಾಂಧೀಜಿ ಬಗ್ಗೆ ತಿಳಿದುಕೊಳ್ಳಬೇಕಾ: ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು

Prasthutha|

- Advertisement -

ಮೈಸೂರು: ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆ ಉತ್ಸವ ಮಾಡುವವರಿಂದ ನಾವು ಗಾಂಧೀಜಿ ಬಗ್ಗೆ ಕೇಳಿ ತಿಳಿದುಕೊಳ್ಳಬೇಕಾ ಎಂದು ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ ವೇಳೆ ರಾಹುಲ್‌ ಗಾಂಧಿ ನಕಲಿ ಗಾಂಧಿ ಎಂದು ಬಸವರಾಜ ಬೊಮ್ಮಾಯಿ ಅವರು ವಾಗ್ದಾಳಿ ನಡೆಸಿದ್ದರು. ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದು ಅವರು ಗಾಂಧಿವಾದಿಗಳಾ? ಅವರು ಗಾಂಧಿ ಕೊಂದವರು. ಗಾಂಧಿ ಕೊಂದ ಗೋಡ್ಸೆ ಉತ್ಸವ ಮಾಡುವವರು‌. ಬೊಮ್ಮಾಯಿಗೆ ಗಾಂಧಿನೂ ಗೊತ್ತಿಲ್ಲಾ, ಗೋಡ್ಸೆನೂ ಗೊತ್ತಿಲ್ಲ, ಸಾವರ್ಕರ್ ಕೂಡ ಗೊತ್ತಿಲ್ಲ. ನಾಥೂರಾಂ ಗೋಡ್ಸೆ ಮೆರವಣಿಗೆ ಮಾಡಿದವರು ಇವರು. ಇವರಿಂದ ಗಾಂಧಿ ಬಗ್ಗೆ ಕೇಳಬೇಕಾ? ಎಂಥ ವಿಪರ್ಯಾಸ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp