ಬೆಂಗಳೂರು: ಈ ನೆಲದಲ್ಲಿ ಗೋಡ್ಸೆ ಸಂತತಿಗಳನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂದು ಕಾಂಗ್ರೆಸ್ ನಾಯಕ, ಪರಿಷತ್ ವಿಪಕ್ಷ ನಾಯಕ ಬಿ. ಕೆ ಹರಿಪ್ರಸಾದ್ ಖಾರವಾಗಿ ಟೀಕಿಸಿದ್ದಾರೆ.
ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಕೊಂದ, ದೇಶದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಹೆಸರನ್ನು ಕಾರ್ಕಳದ ಬೋಳ ಗ್ರಾಮ ಪಂಚಾಯತ್ ರಸ್ತೆಗೆ ನಾಮಕರಣ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ನೆಲದಲ್ಲಿ ಗೋಡ್ಸೆ ಸಂತತಿಗಳನ್ನು ಬುಡ ಸಮೇತ ಕಿತ್ತು ಹಾಕಬೇಕು . ಅದು ಥೇಟ್ ಕಾರ್ಕಳದ ರಸ್ತೆಗೆ ಇಟ್ಟಿದ್ದ ಗೋಡ್ಸೆಯ ನಾಮಫಲಕವನ್ನು ಕಿತ್ತು ಹಾಕಿದಂತೆ. ನಾಮ ಫಲಕ ತೆರವುಗೊಳಿಸಿ ಅದೇ ಜಾಗದಲ್ಲಿ ಶ್ರೀ ನಾರಾಯಣ ಗುರುಗಳ ಹೆಸರಿಡಲು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿರುವ ಯುವ ಕಾಂಗ್ರೆಸ್ ಕಾರ್ಯಕರ್ತರ ಕೆಲಸಕ್ಕೆ ಸಲಾಂ ಎಂದು ಬರೆದುಕೊಂಡಿದ್ದಾರೆ.