ಮುಂಬೈ-ಗೋವಾ ಚತುಷ್ಪಥ ಹೆದ್ದಾರಿ ಮೇಲ್ಸೇತುವೆ ಕುಸಿತ

Prasthutha|

ಮುಂಬೈ: ಮುಂಬೈ-ಗೋವಾ ಚತುಷ್ಪಥ ಹೆದ್ದಾರಿಯ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು ಕುಸಿದು ಬಿದ್ದ ಘಟನೆ ಮಹಾರಾಷ್ಟ್ರದ ಚಿಪ್ಲುನ್ ನಲ್ಲಿ ನಡೆದಿದೆ.

- Advertisement -

ಸೇತುವೆ ಕುಸಿತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಮವಾರ ಈ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಸದ್ಯಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಮೂಲಗಳ ಪ್ರಕಾರ ಇದು ಮಹಾರಾಷ್ಟ್ರದ ದೊಡ್ಡ ರಸ್ತೆ ಸೇತುವೆಯಾಗಿದೆ.