TMC ಜೊತೆ ಮೈತ್ರಿಗೆ ಮುಂದಾದ ಗೋವಾ ಫಾರ್ವರ್ಡ್ ಪಾರ್ಟಿ

Prasthutha|

ಪಣಜಿ: 2022 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ತೃಣಮೂಲ ಕಾಂಗ್ರೇಸ್ ಪಕ್ಷದೊಂದಿಗೆ ಮೈತ್ರಿ ಮಾತುಕತೆ ನಡೆಸುತ್ತದೆ ಎಂದು ಗೋವಾ ಫಾರ್ವರ್ಡ್ ಪಕ್ಷದ ಅಧ್ಯಕ್ಷ ವಿಜಯ್ ಸರ್ದೇಸಾಯಿ ಹೇಳಿದ್ದಾರೆ.

- Advertisement -

ಈ ಬಗ್ಗೆ ಪಕ್ಷದ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಗೋವಾ ಬಿಜೆಪಿ ಸರಕಾರವು ಜನವಿರೋಧಿ ಸರಕಾರವಾಗಿದ್ದು, ಈ ಪಕ್ಷವು ದೆಹಲಿಯ ಆದೇಶದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

ಕೆಟ್ಟದ್ದನ್ನು ಹೊಡೆದೋಡಿಸಿ ಒಳ್ಳೆಯದನ್ನು ಶುಭಾರಂಭಗೊಳಿಸುವುದು ದಸರಾ ಹಬ್ಬದ ಸಂದೇಶವಾಗಿದೆ. ಗೋವಾದಲ್ಲಿ ಬಿಜೆಪಿ ರೂಪಿ ರಾವಣನ ವಧೆಗೆ ನಾವು ಸಜ್ಜಾಗಿದ್ದೇವೆ. ಇದಕ್ಕಾಗಿ ಪರ್ಯಾಯವನ್ನು ನಾವು ಜನರ ಮುಂದಿಡುತ್ತಿದ್ದೇವೆ. ಮುಂಬರುವ ರಾಜ್ಯ ಸರಕಾರ ನಮ್ಮ ಸರಕಾರವೇ ಆಗಿರಲಿದೆ ಎಂದು ಅವರು ತಿಳಿಸಿದ್ದಾರೆ.



Join Whatsapp