ಗೋವಾದ ಬಾರ್ ವಿವಾದ: ಸ್ಮೃತಿ ಇರಾನಿ ಕುಟುಂಬದಿಂದ ಹಣದ ವ್ಯವಹಾರ ಸಾಬೀತು

Prasthutha|

ನವದೆಹಲಿ: ಗೋವಾದ ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್ ನ ಮಾಲಿಕರು ಸ್ಮೃತಿ ಇರಾನಿ ಪುತ್ರಿಯಲ್ಲ ಎಂದು ದಿಲ್ಲಿ ಹೈಕೋರ್ಟಿಗೆ ತಿಳಿಸಲಾಗಿದೆ.

- Advertisement -

 ಮೇ 2021ರಲ್ಲಿ ನಿಧನರಾದ ಅಂತೋಣಿ ಡಿ’ಗಾಮಾ ಎಂಬವರಿಗೆ ಬಾರ್ ನ ಆಸ್ತಿ ಸೇರಿದೆ. ಅವರ ಮಡದಿ ಮೆರ್ಲಿನ್ ಡಿ’ಗಾಮಾ ಹೆಸರಿನಲ್ಲಿ ಮದ್ಯ ಮಾರಾಟ ಪರವಾನಗಿ ಇದೆ ಎಂದು ತಿಳಿಸಲಾಗಿದೆ.

ಆದರೆ ಬಾರ್ ನ ಶೇರು ಮತ್ತು ಹಣ ಚಲಾವಣೆಗೆ ಸಂಬಂಧಿಸಿದಂತೆ ಸ್ಮೃತಿ ಇರಾನಿ ಮತ್ತು ಅವರ ಪುತ್ರಿ ಸಂಬಂಧ ಹೊಂದಿದ್ದಾರೆ. ಅದಕ್ಕೆ ಅಧಿಕೃತ ದಾಖಲೆಗಳೂ ಇವೆ. ಸ್ಮೃತಿಯವರ ಮಗಳು ಜೋಯ್ಸ್ ಇರಾನಿ, ಮಗ ಜೋಹ್ರ್ ಇರಾನಿ, ಗಂಡ ಜುಬಿನ್ ಇರಾನಿ, ಅವರ ಮೊದಲ ಹೆಂಡತಿಯ ಮಗಳು ಶನೇಲಿ ಇರಾನಿಯವರು ಉಗ್ರವ ಮರ್ಕಂಟೇಲ್ ಪ್ರೈ. ಲಿ. ಮತ್ತು ಆಗ್ರೋ ಫಾರ್ಮ್ಸ್ ಪ್ರೈ. ಲಿ. ಮಾಲೀಕರಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಇವರ ಕಂಪೆನಿಗಳು 2020- 21ರಲ್ಲಿ ಎಯ್ಟಾಲ್ ಫುಡ್ ಮತ್ತು ಬಿವರೇಜಸ್ ಲಿಮಿಟೆಡ್ ನಲ್ಲಿ ಹಣ ಹೂಡಿಕೆ ಮಾಡಿವೆ. 2020ರಲ್ಲಿ ಎಯ್ಟಾಲ್ ಕಾರ್ಪೊರೇಟ್ ಕಂಪೆನಿಯಾಗಿ ನಮೂದಾಯಿತು. ಎಯ್ಟಾಲ್ ನ ಜಿಎಸ್ ಟಿಐಎನ್ ದಾಖಲೆಯು ಅವರ ಮುಖ್ಯ ವ್ಯವಹಾರ ವಿಳಾಸವನ್ನು ಮ. ನಂ. 452, ನೆಲ ಅಂತಸ್ತು, ಬೌಟಾ ವಡ್ಡೋ, ಅಸಾಗೋವಾ, ನಾರ್ತ್ ಗೋವಾ, ಗೋವಾ ಎಂದು ನೀಡಲಾಗಿದೆ.

ವಿಚಿತ್ರವೆಂದರೆ ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್ ನ ವಿಳಾಸವೂ ಇದೇ ಆಗಿದೆ. ಸ್ಮೃತಿ ಇರಾನಿಯ ಇಡೀ ಕುಟುಂಬ ಅದರಲ್ಲಿ ತೊಡಗಿಕೊಂಡಿದೆ. 

ಉಗ್ರವ ಮರ್ಕಂಟೇಲ್ ಪ್ರೈ. ಲಿ. ಮತ್ತು ಆಗ್ರೋ ಫಾರ್ಮ್ಸ್ ಪ್ರೈ. ಲಿ. ಸಂಸ್ಥೆಗಳು ಕ್ರಮವಾಗಿ ಎಯ್ಟಾಲ್ ನ ಒಟ್ಟು ಬಂಡವಾಳದಲ್ಲಿ 50% ಮತ್ತು 25% ಹೂಡಿಕೆ ಮಾಡಿವೆ. 2020 ನವೆಂಬರ್ 5ರ ಕಂಪೆನಿ ದಾಖಲೆಗಳಲ್ಲಿ ಕಂಡುಬಂದಿದೆ.

2021 ಮಾರ್ಚ್ 31ರ ವರ್ಷಾಂತ್ಯ ದಾಖಲೆಯಂತೆಯೂ ಉಗ್ರವ ಮರ್ಕಂಟೇಲ್ ಪ್ರೈ. ಲಿ. ಮತ್ತು ಆಗ್ರೋ ಫಾರ್ಮ್ಸ್ ಪ್ರೈ. ಲಿ.ಗಳು ಎಯ್ಟಾಲ್ ನ ಮುಕ್ಕಾಲು ಭಾಗದ ಮಾಲಿಕರಾಗಿದ್ದಾರೆ. ಜುಬಿನ್ ಇರಾನಿ 67%, ಜೋಯ್ಸ್ ಇರಾನಿ ಮತ್ತು ಶನೇಲಿ ಇರಾನಿಯವರು 11%+11% ಹಾಗೂ ಜೋಹ್ರ್ ಇರಾನಿ ಸಹ 11% ಪಾಲು ಬಂಡವಾಳ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

Join Whatsapp