ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಕೇವಲ ಚುನಾವಣಾ ಗಿಮಿಕ್ ಮಾತ್ರ: ಎಂ. ಲಕ್ಷ್ಮಣ

Prasthutha|

ಮಡಿಕೇರಿ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (GIM) ಎಂಬುವುದು ರಾಜಕೀಯ ಪ್ರಚಾರವಾಗಿದ್ದು, ಇದೊಂದು ಕೇವಲ ಚುನಾವಣಾ ಗಿಮಿಕ್ ಆಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, GIM ನ ಜಾಹೀರಾತಿಗಾಗಿ‌ ₹120 ಕೋಟಿ ಸಾರ್ವಜನಿಕರ ಹಣ ವ್ಯಯಿಸಲಾಗಿದೆ. ಸಮಾವೇಶದಲ್ಲಿ ಬಂಡವಾಳ ಹೂಡಿಕೆ ಕುರಿತು ಘೋಷಣೆಯಷ್ಟೇ ಆಗಿದೆ. ಯಾರ ಜತೆಯೂ ನಿರ್ದಿಷ್ಟ ಒಪ್ಪಂದ ಆಗಿಲ್ಲ. ಅಲ್ಲಿ ಹಾಕಿದ್ದ 160 ಮಳಿಗೆಗಳ ಪೈಕಿ ಕೇವಲ 56 ಮಳಿಗೆಗಳು ಮಾತ್ರವೇ ಭರ್ತಿಯಾಗಿವೆ. ಈ ಸಮಾವೇಶದಲ್ಲಿ ಕೊಡಗಿಗೆ ಎಷ್ಟು ಪಾಲು ಸಿಕ್ಕಿದೆ ಎಂಬುದನ್ನು ಇಲ್ಲಿನ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚುರಂಜನ್ ಬಹಿರಂಗಪಡಿಸಬೇಕು ಎಂದು ಹೇಳಿದರು.

ಭ್ರಷ್ಟಾಚಾರವನ್ನೇ ಹೊದ್ದುಕೊಂಡಿರುವ ಬಿಜೆಪಿ ಸರ್ಕಾರ ಇದೀಗ ಆ ಕಳಂಕವನ್ನು ಪತ್ರಕರ್ತರಿಗೆ ಮೆತ್ತುವ ಕೆಲಸ ಮಾಡಿದೆ. ಶಾಸಕರನ್ನು ಖರೀದಿ ಮಾಡಿದ ಬಿಜೆಪಿ ಇದೀಗ‌ ಪತ್ರಿಕಾ ರಂಗವನ್ನೇ ಖರೀದಿಸಲು ಯತ್ನಿಸಿದೆ. ಇಂತಹ  ನೀಚ ಕೆಲಸವನ್ನು ಬೊಮ್ಮಾಯಿಯಂತಹವರಿಂದ ನಿರೀಕ್ಷೆ ಮಾಡಿರಲಿಲ್ಲ. ಕೂಡಲೇ ಅವರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.



Join Whatsapp