ಸುಳ್ಳಿಗೆ ‘ಆಸ್ಕರ್’ ಇದ್ದರೆ ಮೋದಿಗೆ ಕೊಟ್ಟು ಬಿಡಿ | ಸಲೀಂ ಅಹ್ಮದ್ ವ್ಯಂಗ್ಯ

Prasthutha|

ಬೆಂಗಳೂರು: ಸುಳ್ಳು ಹೇಳುವುದಕ್ಕೇನಾದರೂ ಆಸ್ಕರ್ ಪ್ರಶಸ್ತಿ ಇದ್ದರೆ ಅದನ್ನು ಪ್ರಧಾನಿ ನರೇಂದ್ರ ಮೋದಿಗೆ ಕೊಟ್ಟು ಬಿಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವ್ಯಂಗ್ಯವಾಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ಸುಳ್ಳಿನಿಂದಲೇ ಅಧಿಕಾರಕ್ಕೆ ಬಂದಿರುವ ಮೋದಿಗೇ ಆಸ್ಕರ್ ನೀಡಿ ಎಂದಿದ್ದಾರೆ.

- Advertisement -

ಮೋದಿ ಕಳೆದ ಏಳು ವರ್ಷಗಳಲ್ಲಿ ಸುಳ್ಳನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಕೋಟ್ಯಂತರ ಮಂದಿ ನಿರುದ್ಯೋಗಿಗಳಿದ್ದಾರೆ. ಮೋದಿ ನೇತೃತ್ವದ ಸರಕಾರದಿಂದ ಜನರ ಜೀವನವು ನರಕವಾಗಿದೆ ಎಂದು ಕಿಡಿಕಾರಿದರು.


ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿಫಲವಾಗಿವೆ, ಮೊದಲನೆ ಹಾಗೂ ಎರಡನೇ ಅಲೆಯಲ್ಲಿ ಲಕ್ಷಾಂತರ ಮಂದಿಯ ಪ್ರಾಣ ಹೋಗಿದೆ. ಮೂರನೆ ಅಲೆಯ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಸರಕಾರದ ಕೋವಿಡ್ ಮರಣದ ಅಂಕಿ ಅಂಶಗಳು ಸ್ಪಷ್ಟತೆ ಹೊಂದಿಲ್ಲ ಎಂದು ಆರೋಪಿಸಿದರು.

Join Whatsapp