ಬೆಂಗಳೂರು; ಬೆಂಗಳೂರು ನಗರ 28,ಕ್ಷೇತ್ರಗಳ ಪೈಕಿ ನಾಲ್ಕು ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿ.ವಿ.ರಾಮನ್ ನಗರದಿಂದ ಮಾದಿಗ ಜನಾಂಗಕ್ಕೆ ಸೇರಿದ ಎಡಗೈ ಸಮುದಾಯದವರಿಗೆ ಟಿಕೇಟ್ ನೀಡಬೇಕೆಂದು ಕರ್ನಾಟಕ ಬಹುಜನ ಸಮಿತಿ ಒತ್ತಾಯಿಸಿದೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಬು.ಎನ್, ತ್ರಿಲೋಕ್ ಚಂದರ್, ಬೆಂಗಳೂರು ನಗರ 28 ಕ್ಷೇತ್ರಗಳ ಪೈಕಿ ನಾಲ್ಕು ಮೀಸಲು ಕ್ಷೇತ್ರದಲ್ಲಿ ಸಿ.ವಿ.ರಾಮನ್ ನಗರ ವಿಧಾನ ಸಭಾ ಕ್ಷೇತ್ರದಿಂದ ಮಾದಿಗ ಜನಾಂಗಕ್ಕೆ ಸೇರಿದ ಗೌತಮ್ ಸೇರಿದಂತೆ ಮಾದಿಗ ಜನಾಂಗಕ್ಕೆ ಸೇರಿದ ಯಾರಿಗಾದರೂ ಟಿಕೆಟ್ ನೀಡಬೇಕು ಎಂದು ತಿಳಿಸಿದರು.
ಈ ಬಾರಿ ಮೊದಲ ಪಟ್ಟಿಯಲ್ಲಿ ಬಲಗೈ ಜನರಿಗೆ ಈಗಾಗಲೇ 12 ಸೀಟು ಘೋಷಣೆಯಾಗಿ ಎಡಗೈ ಸಮುದಾಯಕ್ಕೆ 4 ಸೀಟು ಮಾತ್ರ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಕನಿಷ್ಠ 15 ಸೀಟುಗಳನ್ನು ಮಾದಿಗ ಜನಾಂಗಕ್ಕೆ ನೀಡಬೇಕು. ಬೆಂಗಳೂರು ನಗರದ ನಾಲ್ಕು ಮೀಸಲು ಕ್ಷೇತ್ರದಲ್ಲಿ ಒಂದನಾದರೂ ಮಾದಿಗ ಜನಾಂಗಕ್ಕೆ ಸೇರಿದವರಿಗೆ ನೀಡಬೇಕೆಂದು ಆಗ್ರಹಿಸಿದರು.
ಹಲವು ತಲೆಮಾರುಗಳಿಂದ ಮಾದಿಗ ಜನಾಂಗ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಆದರೆ ಪ್ರತಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಈ ಜನಾಂಗಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಸತ್ಯನಾರಾಯಣ, ಕಾರ್ಯದರ್ಶಿ ಜಗದೀಶ್ ಮತ್ತಿತರರು ಹಾಜರಿದ್ದರು.