ಅರ್ಹರಿಗೆ ಬಗರ್ ಹುಕುಂ ಜಮೀನು ಕೊಡಿ, ಪ್ರಭಾವಕ್ಕೆ ಮಣಿಯಬೇಡಿ; ಅಧಿಕಾರಿಗಳಿಗೆ ಡಿ.ಕೆ. ಶಿವಕುಮಾರ್ ತಾಕೀತು

Prasthutha|

ಕನಕಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕನಕಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಗರ್ ಹುಕುಂ ಸಾಗುವಳಿ ಸಮಿತಿ ಸಭೆ ನಡೆಸಿದರು.

- Advertisement -

ಪ್ರಭಾವಿಗಳ ಒತ್ತಡಕ್ಕೆ, ಶಿಫಾರಸ್ಸುಗಳಿಗೆ ಮಣಿದು ಬಗರ್ ಹುಕುಂ ಸಾಗುವಳಿ ಚೀಟಿ ನೀಡಬಾರದು. ಸಾಗುವಳಿ ಅರ್ಜಿ ಹಾಕಿರುವವರ ಜಮೀನಿನ ಸಮೀಕ್ಷೆ ನಡೆಸಿ, ಅರ್ಹ ಫಲಾನುಭವಿಗಳಿಗೆ ಮಾತ್ರ ಭೂಮಿ ಮಂಜೂರು ಮಾಡಬೇಕು ಎಂದು ತಾಲೂಕು ಬಗರ್ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮಿತಿ ಸದಸ್ಯರಾದ ರವಿಕುಮಾರ್, ಮುತ್ತುರಾಜ್, ಶಶಿಕಲಾ ಭೈರೇಗೌಡ, ತಹಶೀಲ್ದಾರ್ ವಿ.ಆರ್. ವಿಶ್ವನಾಥ್, ತಾಲೂಕು ಪಂಚಾಯಿತಿ ಸಿಇಒ ಎಲ್. ಮಧು, ಲೋಕೋಪಯೋಗಿ ಎಇಇ ಮೂರ್ತಿ, ನಗರಸಭೆ ಆಯುಕ್ತ ಟಿ.ವಿ. ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.

Join Whatsapp