ಕ್ಲಿಕ್ ಆದ ಬಾಲಕಿಯ ಫ್ರೀ ಕಿಕ್; ಕತರ್ ಫುಟ್ಬಾಲ್ ವಿಶ್ವಕಪ್ ವೀಕ್ಷಣೆಗೆ ಆಹ್ವಾನ

Prasthutha|

ಮಲಪ್ಪುರಂ:  ಶಾಲೆಯಲ್ಲಿ ನಡೆದ ಫುಟ್ಬಾಲ್ ಸ್ಪರ್ಧೆಯಲ್ಲಿ ಫ್ರೀ ಕಿಕ್ ಹೊಡೆದು ತಾರೆಯಾದ ಫಿದಾ ಫಾತಿಮಾಗೆ ಕತರ್ ನಲ್ಲಿ ನಡೆಯುವ ವಿಶ್ವಕಪ್ ನೋಡಲು ಅವಕಾಶ ಸಿಕ್ಕಿದೆ ಎಂದು ತಿಳಿದು ಬಂದಿದೆ.

- Advertisement -

ಮಲಪ್ಪುರಂನ ತಿರೂರ್ ಕ್ಕಾಡ್  ಎಎಂ ಹೈಯರ್ ಸೆಕೆಂಡರಿ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಫಿದಾ ಫಾತಿಮಾ  ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಆಯೋಜಿಸಲಾದ ಶಾಲಾ ಫುಟ್‌ಬಾಲ್ ಸ್ಪರ್ಧೆಯಲ್ಲಿ ಫ್ರೀ ಕಿಕ್ ಮೂಲಕ ತಾರೆಯಾಗಿದ್ದರು. ಫಿದಾ ಆಡಿರುವ  ಸ್ಪರ್ಧೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿತ್ತು.

ಫಿದಾ ಫಾತಿಮಾ ಅವರ ಪ್ರಿಯ ಆಟಗಾರ ಪೋರ್ಚುಗಲ್  ತಂಡದ ರೊನಾಲ್ಡೊ. ಅವರ ಆಟ ನೋಡಲು ಫಿದಾಗೆ ಅವಕಾಶ ಸಿಕ್ಕಿದೆ. ನವೆಂಬರ್ 28 ರಂದು ದೋಹದಲ್ಲಿನ ಗೋ ಮುಸಾಫರ್ ಟ್ರಾವೆಲ್ಸ್ ಮಾಲೀಕ ಫಿರೋಸ್ ಎನ್ನುವವರು ವಿಶ್ವಕಪ್‌ನಲ್ಲಿ ಪೋರ್ಚುಗಲ್ ಉರುಗ್ವೆ ನಡುವಿನ ಪಂದ್ಯವನ್ನು ನೋಡುವ ಟಿಕೆಟ್ ಮತ್ತು ವಿಮಾನ ಪ್ರಯಾಣ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ.

Join Whatsapp