ಪ್ರಜ್ಞಾಹೀನಳಾಗಿ ಬಿದ್ದ ಬಾಲಕಿ: ಆಸ್ಪತ್ರೆಗೆ ದಾಖಲಿಸುವ ಬದಲು ವೀಡಿಯೋ ಚಿತ್ರೀಕರಣ ಮಾಡಿದ ಜನರು

Prasthutha|

ಲಕ್ನೋ: ಕನ್ನೌಜ್ ನ ಸರ್ಕಾರಿ ಅತಿಥಿ ಗೃಹದ ಬಳಿ ಭಾನುವಾರ ಸಂಜೆ ಪ್ರಜ್ಞಾಹೀನಳಾಗಿ ರಕ್ತಸ್ರಾವವಾಗಿ ಬಿದ್ದಿದ್ದ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

- Advertisement -

ಗಾಯಗೊಂಡ ಬಾಲಕಿ ಪೊದೆಗಳಲ್ಲಿ ಬಿದ್ದಿರುವ ವೀಡಿಯೊಗಳನ್ನು ಪ್ರೇಕ್ಷಕರು ರೆಕಾರ್ಡ್ ಮಾಡುತ್ತಿರುವುದು ವೈರಲ್ ಆದ ನಂತರ  ಈ ಸುದ್ದಿ ಬೆಳಕಿಗೆ ಬಂದಿತ್ತು.

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದರೆ, ವೈದ್ಯರ ಸಮಿತಿಯು ಮಂಗಳವಾರ ಬಾಲಕಿಯನ್ನು ಪರೀಕ್ಷಿಸಿ ವರದಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಹೇಳಿಕೆಯನ್ನು ಇನ್ನೂ ದಾಖಲಿಸಲಾಗಿಲ್ಲ ಎಂದು ಕನ್ನೌಜ್ ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ತಿಳಿಸಿದ್ದಾರೆ.

- Advertisement -

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾದ ವೀಡಿಯೋದಲ್ಲಿ, ಬಾಲಕಿಯೊಬ್ಬಳು ಗಾಯಗೊಂಡು ರಕ್ತಸ್ರಾವದಿಂದ ಪ್ರಜ್ಞಾಹೀನಳಾಗಿ ನೆಲದ ಮೇಲೆ ಬಿದ್ದಿದ್ದರೆ, ಜನರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ವೀಡಿಯೋ ಮಾಡುತ್ತಿರುವುದನ್ನು ಕಾಣಬಹುದು.

Join Whatsapp