ಆ್ಯಪ್ ಮೂಲಕ ಯುವತಿಯನ್ನು ಮನೆಗೆ ಕರೆಸಿ ಅತ್ಯಾಚಾರ

Prasthutha|

ಬೆಂಗಳೂರು: ಕೆಲಸಕ್ಕೆಂದು ಯುವತಿಯನ್ನು ‘ಬುಕ್ ಮೈ ಬಾಯಿ’ ಎಂಬ ಆ್ಯಪ್ ಮೂಲಕ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ ಕೃತ್ಯ ಪರಪ್ಪನ ಅಗ್ರಹಾರದ  ಕೂಡ್ಲು ಬಡಾವಣೆಯಲ್ಲಿ ನಡೆದಿದೆ.

- Advertisement -

ಬುಕ್ ಮೈ ಬಾಯಿ ಆ್ಯಪ್’ನಿಂದ 21 ವರ್ಷದ ಯುವತಿಯನ್ನು ಮನೆಗೆ ಕರೆಸಿಕೊಂಡ ಬಾಬು (47) ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಪ್ರಕರಣ ದಾಖಲಿಸಿರುವ ಪರಪ್ಪನ ಅಗ್ರಹಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬುಕ್ ಮೈ ಬಾಯಿ ಆ್ಯಪ್ ಮನೆಗೆಲಸಕ್ಕೆ ಮಹಿಳೆಯರನ್ನು ಒದಗಿಸುವ ಆನ್ ಲೈನ್ ಕಂಪನಿಯಾಗಿದ್ದು, ವಿಲ್ಸನ್ ಗಾರ್ಡನ್ ಬಳಿ ಕಚೇರಿ ಇದೆ. ಈ ಆ್ಯಪ್ ಮೂಲಕ ವೃದ್ಧೆ ತಾಯಿಯನ್ನು ನೋಡಿಕೊಳ್ಳಲೆಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಕೂಡ್ಲು ಬಡಾವಣೆಯ ಬಾಬು ಒರಿಸ್ಸಾ ಮೂಲದ 21 ವರ್ಷದ ಯುವತಿಯನ್ನು ಕರೆಸಿಕೊಂಡಿದ್ದಾನೆ. ಯುವತಿ ಮನೆಗೆ ಬಂದ ತಕ್ಷಣವೇ ಆಕೆಯ ಮೇಲೆ ಅತ್ಯಾಚಾರ ಎಸಗಿ ಯಾರಿಗಾದರೂ ಹೇಳಿದರೆ ಕೊಲೆ ಮಾಡಿ ಬಿಡುತ್ತೇನೆ ಎಂದು ಜೀವಬೆದರಿಕೆ ಹಾಕಿ ಮನೆಯಲ್ಲಿ ಕೂಡಿ ಹಾಕಿ ಕೆಲಸಕ್ಕೆ ತೆರಳಿದ್ದಾನೆ ಎನ್ನಲಾಗಿದೆ.

- Advertisement -

ತನ್ನ ಬಳಿ ಇದ್ದ ಮೊಬೈಲ್’ನಿಂದ ಕಂಪನಿಗೆ ಕರೆ ಮಾಡಿದ ಯುವತಿ, ನಡೆದಿರುವ ಕೃತ್ಯವನ್ನು ಹೇಳಿಕೊಂಡಿದ್ದಾಳೆ. ಕೂಡಲೇ ಎಚ್ಚೆತ್ತ ಕಂಪನಿ, ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆ. ಈ ಹಿನ್ನೆಲೆ ಪ್ರಕರಣ ದಾಖಲಿಸಿದ ಪೊಲೀಸರು, ಆರೋಪಿ ಬಾಬುನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕಳೆದ ನವೆಂಬರ್ 31ರ ರಾತ್ರಿ ಈ ಘಟನೆ ನಡೆದಿದ್ದು, ಡಿ.2 ರಂದು ಪರಪ್ಪನ ಅಗ್ರಹಾರ ಪೊಲೀಸರು ಸಂತ್ರಸ್ತೆಯಿಂದ ಹೇಳಿಕೆ ಪಡೆದುಕೊಂಡಿದ್ದರು. ಈ ಕೃತ್ಯದ ನಂತರ ಆನ್’ಲೈನ್ ಕಂಪನಿಗಳಲ್ಲಿಯೂ ಆತಂಕ ಹೆಚ್ಚಳವಾಗಿದೆ.

Join Whatsapp