ಕಾಂಗ್ರೆಸ್’ಗೆ ಮರಳಿದ ಗುಲಾಂ ನಬಿ ಆಜಾದ್ ಬೆಂಬಲಿಗರು

Prasthutha|

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಲ್ಲಿ ಗುಲಾಂ ನಬಿ ಆಜಾದ್ ಬೆಂಬಲಿಗರು ಕಾಂಗ್ರೆಸ್ಸಿಗೆ ಮರಳಿದ್ದಾರೆ.

- Advertisement -


ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ತಾರಾ ಚಂದ್ ಮೊದಲಾದವರು ಆಜಾದ್ ಅವರು ಹೊಸ ಪಕ್ಷ ಸ್ಥಾಪಿಸಿದಾಗ ಅವರೊಂದಿಗೆ ಹೊಸ ಪಕ್ಷಕ್ಕೆ ಹೋದವರು ಈಗ ಭಾರತ್ ಜೋಡೋ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಮರಳಿ ಬಂದಿದ್ದಾರೆ.
ಮಾಜಿ ಸಚಿವ ಪೀರ್ ಜಾದಾ ಮುಹಮ್ಮದ್ ಸಯೀದ್, ಮಾಜಿ ಶಾಸಕ ಬಲವಾನ್ ಸಿಂಗ್, ಜಮ್ಮು ಕಾಶ್ಮೀರ ಜಿಲ್ಲಾಧ್ಯಕ್ಷ ವಿನೋದ್ ಶರ್ಮಾ ಮೊದಲಾದವರು ಮತ್ತೆ ಕಾಂಗ್ರೆಸ್ಸಿಗೆ ಶುಕ್ರವಾರ ಹಿಂದಿರುಗಿದ್ದಾರೆ.


ಪೀರ್ ಜಾದಾ ಬೆಳಿಗ್ಗೆ ದೆಹಲಿಗೆ ಬರುವುದು ತಡವಾದರೂ ಅನಂತರ ಬಂದು ಸೇರಿಕೊಂಡರು.
ಇವರೆಲ್ಲ ಕಾಂಗ್ರೆಸ್ ಪಕ್ಷದವರೇ ಆಗಿದ್ದು, ಗುಲಾಂ ನಬಿ ಆಜಾದ್ ಪಕ್ಷ ಬಿಟ್ಟು ಹೋಗಿ ಡೆಮಾಕ್ರೆಟಿಕ್ ಆಜಾದ್ ಪಕ್ಷ ಕಟ್ಟಿದಾಗ ಅವರ ಹಿಂದೆ ಆ ಪಕ್ಷಕ್ಕೆ ಹೋಗಿದ್ದರು. ಚುನಾವಣಾ ಆಯೋಗದಲ್ಲಿ ತನ್ನ ಪಕ್ಷವನ್ನು ನೋಂದಾಯಿಸಿರುವ ಗುಲಾಂ ನಬಿ ಆಜಾದ್ ಅವರು ಪಕ್ಷ ವಿರೋಧಿ ಚಟುವಟಿಕೆ ಎಂದು ಈಗಾಗಲೇ ತಾರಾ ಚಂದ್, ಬಲವಾನ್ ಸಿಂಗ್, ಮನೋಹರ್ ಲಾಲ್ ಶರ್ಮಾ ಮೊದಲಾದವರನ್ನು ತಮ್ಮ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.
ಈ ಉಚ್ಚಾಟನೆ ಪ್ರತಿಭಟಿಸಿ ಜಮ್ಮು ಮತ್ತು ಕಾಶ್ಮೀರ ಬಾರ್ ಅಸೋಸಿಯೇಶನ್’ನ ಅಧ್ಯಕ್ಷರಾಗಿ ಆಯ್ಕೆಯಾಗಿರುವ . ಕೆ. ಭಾರದ್ವಾಜ್ ಮತ್ತು 126 ಮಂದಿ ಇತರರು ಡಿಎಪಿ- ಡೆಮಾಕ್ರೆಟಿಕ್ ಆಜಾದ್ ಪಕ್ಷದ ನಡೆ ಪ್ರಶ್ನಿಸಿ ಹೊರ ನಡೆದಿದ್ದಾರೆ.

- Advertisement -


ತಾರಾ ಚಂದ್ ಅವರು ಖೋರ್ ವಿಧಾನ ಸಭಾ ಕ್ಷೇತ್ರದಿಂದ 1996, 2002, 2008ರಲ್ಲಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾದವರು ಮತ್ತು ಉಪ ಮುಖ್ಯಮಂತ್ರಿ ಮತ್ತು ವಿಧಾನ ಸಭೆಯ ಸಭಾಪತಿ ಆಗಿದ್ದವರು. ಶರ್ಮಾ ಮಾಜಿ ಸಚಿವ ಹಾಗೂ ಬಲವಾನ್ ಸಿಂಗ್ ಮಾಜಿ ಶಾಸಕರು.


ಪೀರ್ ಜಾದಾ ಕೂಡ ಹಿಂದೆ ಮಂತ್ರಿ ಆಗಿದ್ದವರು. 2003- 07ರ ಅವಧಿಯಲ್ಲಿ ಜಮ್ಮು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು. ಇವರಲ್ಲಿ ಮನೋಹರಲಾಲ್ ಶರ್ಮಾ ಕಾಂಗ್ರೆಸ್ಸಿಗೂ ಸೇರದೆ ಸ್ವತಂತ್ರ ರಾಜಕಾರಣಿಯಾಗಿ ಉಳಿಯುವರು ಎಂದು ಹೇಳಲಾಗಿದೆ.



Join Whatsapp