ಹೊಸ ರಾಜಕೀಯ ಪಕ್ಷ ಆರಂಭಿಸಲಿರುವ ಗುಲಾಂ ನಬಿ ಆಜಾದ್?

Prasthutha|

ನವದೆಹಲಿ: ಕಾಂಗ್ರೆಸ್ ಗೆ  ರಾಜೀನಾಮೆ ನೀಡಿರುವ ಗುಲಾಂ ನಬಿ ಆಜಾದ್ ಅವರು ತಮ್ಮ ಹೊಸ ರಾಜಕೀಯ ಪಕ್ಷವನ್ನು ರಚಿಸುತ್ತಾರೆ ಎಂಬ ಮಾಹಿತಿ ಹೊರಬರುತ್ತಿದೆ.

- Advertisement -

ಆಜಾದ್ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರನ್ನು ಬೆಂಬಲಿಸಿ ಜಮ್ಮು ಮತ್ತು ಕಾಶ್ಮೀರದ ಶಾಸಕರಾದ ಜಿಎಂ ಸರೂರಿ, ಚೌಧರಿ ಮುಹಮ್ಮದ್ ಅಕ್ರಮ್, ಮುಹಮ್ಮದ್ ಅಮೀನ್ ಭಟ್, ಗುಲ್ಜಾರ್ ಅಹ್ಮದ್ ಮತ್ತು ಅಬ್ದುರ್ ರಶೀದ್ ದಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರಿಂದ ಈ  ಮಾಹಿತಿ ಕೇಳಿಬಂದಿದೆ ಎನ್ನಲಾಗಿದೆ.

ಇನ್ನೂ ಅನೇಕ ನಾಯಕರು ಸಹ ಕಾಂಗ್ರೆಸ್ ತೊರೆಯಬಹುದು ಎಂಬ ಮಾಹಿತಿ ಹೊರಬರುತ್ತಿದೆ.ಈ ಕುರಿತು ಸ್ಪೋಟಕ ಹೇಳಿಕೆ ನೀಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಜಿ.ಎಂ.ಸರೂರಿ, ಆಜಾದ್ ಅವರು ಬಿಜೆಪಿಗೆ ಸೇರುವುದಿಲ್ಲ ಆದರೆ ಶೀಘ್ರದಲ್ಲೇ ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುತ್ತಾರೆ  ಎಂದು ಹೇಳಿದ್ದಾರೆ.

Join Whatsapp