ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕಿ ಗೀತಾಂಜಲಿ ಅಯ್ಯರ್ ನಿಧನ

Prasthutha|

ಹೊಸದಿಲ್ಲಿ: ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕರಲ್ಲಿ ಒಬ್ಬರಾಗಿದ್ದ ಮತ್ತು 30 ವರ್ಷಗಳ ಕಾಲ ರಾಷ್ಟ್ರೀಯ ಪ್ರಸಾರ ಸಂಸ್ಥೆಯಲ್ಲಿ ಸುದ್ದಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದ ಗೀತಾಂಜಲಿ ಅಯ್ಯರ್ ಅವರು ಬುಧವಾರ (ಜೂನ್ 7) ನಿಧನರಾದರು.

- Advertisement -

1971 ರಲ್ಲಿ ದೂರದರ್ಶನ ಸೇರಿದ್ದ ಅವರು ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದರು. ದಶಕಗಳ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಅತ್ಯುತ್ತಮ ಆ್ಯಂಕರ್​​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಅವರು ತಮ್ಮ ಅತ್ಯುತ್ತಮ ಕೆಲಸ, ಸಾಧನೆಗಳು ಮತ್ತು ಕೊಡುಗೆಗಾಗಿ 1989 ರಲ್ಲಿ ‘ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ’ಗೂ ಭಾಜನರಾಗಿದ್ದರು. ಅವರು ಭಾರತದ ಪ್ರಮುಖ ದಾನಿಗಳನ್ನೊಳಗೊಂಡ ‘ವರ್ಲ್ಡ್ ವೈಡ್ ಫಂಡ್’ನ ಮುಖ್ಯಸ್ಥರೂ ಆಗಿದ್ದರು.

- Advertisement -

ಗೀತಾಂಜಲಿ ಅಯ್ಯರ್ ಅವರು ಕೋಲ್ಕತ್ತಾದ ಲೊರೆಟೊ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ಡಿಪ್ಲೊಮಾ ಕೂಡ ಪಡೆದಿದ್ದರು.

ದೂರದರ್ಶನದಲ್ಲಿ ಸುದ್ದಿ ನಿರೂಪಕಿಯಾಗಿ ಯಶಸ್ವಿ ವೃತ್ತಿಜೀವನದ ನಂತರ ಗೀತಾಂಜಲಿ ಅವರು, ಕಾರ್ಪೊರೇಟ್ ಸಂವಹನ, ಸರ್ಕಾರಿ ಸಂಪರ್ಕ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದರು. ಅವರು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯಲ್ಲಿ (ಸಿಐಐ) ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಲ್ಲದೆ, ಧಾರಾವಾಹಿಯಲ್ಲಿ ಸಹ ನಟಿಸಿದ್ದರು.

Join Whatsapp