ಟೆಕ್ಕಿ ಬಲಿಯಾದ ಬೆನ್ನಲ್ಲೇ “ಮರಣಗುಂಡಿ” ಗಳನ್ನು ಮುಚ್ಚಲು ಮುಂದಾದ ಜಿಸಿಸಿ

Prasthutha|

ಚೆನ್ನೈ : ಯುವ ಟೆಕ್ಕಿಯೋರ್ವ ರಸ್ತೆ ಗುಂಡಿಗೆ ಬಲಿಯಾದ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಗ್ರೇಟರ್ ಚೆನ್ನೈ ಕಾರ್ಪೋರೇಷನ್- ಜಿಸಿಸಿ, ನಗರದಾದ್ಯಂತ ಇರುವ ಅಪಾಯಕಾರಿ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದೆ.

- Advertisement -


ಚೆನ್ನೈನ ನಗರದ ಅಣ್ಣಾ ಸಲೈ ರಸ್ತೆಯಲ್ಲಿ ಸೋಮವಾರ, 32 ವರ್ಷ ವಯಸ್ಸಿನ ಸಾಫ್ಟ್ವೇರ್ ಇಂಜಿನಿಯರ್ ಮೊಹಮ್ಮದ್ ಯೂನುಸ್ರ ಬೈಕ್ ರಸ್ತೆಗುಂಡಿಗೆ ಇಳಿದ ಪರಿಣಾಮ ಅವರು ರಸ್ತೆಯ ಮೇಲೆ ಬಿದ್ದರು. ಪಕ್ಕದಲ್ಲೇ ಚಲಿಸುತ್ತಿದ್ದ ಸರ್ಕಾರಿ ಸಾರಿಗೆ ಬಸ್ ಅವರ ಮೇಲೆ ಸಾಗಿದ್ದು, ಯೂನುಸ್ ಸ್ಥಳದಲ್ಲೇ ಸಾವಪ್ಪಿದರು. ಈ ಘಟನೆಯ ಸಿಸಿಟಿವಿ ಫೂಟೇಜ್ ವೈರಲ್ ಆಗಿತ್ತು.
ರಸ್ತೆಗುಂಡಿಗಳನ್ನು ಮುಚ್ಚದಿರುವ ಬಗ್ಗೆ ನಗರಪಾಲಿಕೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರದ “ಮರಣಗುಂಡಿ”ಗಳನ್ನು ಮುಚ್ಚಲು ಚೆನ್ನೈ ಕಾರ್ಪೊರೇಷನ್ ಮುಂದಾಗಿದೆ.


ಗ್ರೇಟರ್ ಚೆನ್ನೈ ಕಾರ್ಪೋರೇಷನ್- ಜಿಸಿಸಿ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಉಂಟಾಗಿರುವ 40 ಮಿಲಿಮೀಟರ್ಗೂ ಹೆಚ್ಚು ದೊಡ್ಡದಾದ ಗುಂಡಿಗಳನ್ನು ಮುಚ್ಚಲು ತಕ್ಷಣವೇ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಕೆಲಸಕ್ಕಾಗಿ ಜಿಸಿಸಿಯು 1,000 ಕಾರ್ಮಿಕರನ್ನು ನಿಯೋಜನೆಗೊಳಿಸಲಿದ್ದು, 15 ವಲಯಗಳಿಗೆ ತಲಾ 10 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.ಘಟನೆಯ ಕುರಿತು ವಿವರಣೆ ನೀಡುವಂತೆ ಹೆದ್ದಾರಿ ವಿಭಾಗಕ್ಕೆ ಟ್ರಾಫಿಕ್ ತನಿಖಾ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಇದೇ ವೇಳೆ ಖಾಸಗಿಡ ಟೆಲಿಕಾಂ ಕಂಪನಿಯ ಕೆಲಸದಿಂದ ರಸ್ತೆಯಲ್ಲಿ ಗುಂಡಿ ನಿರ್ಮಾವಾಗಿದ್ದು, ಇದುವೇ ಅಣ್ಣಾ ಸಲೈ’ನಲ್ಲಿ ಯುವಕನ ಸಾವಿಗೆ ಕಾರಣ ಎಂದು ಆರೋಪಿಸಿ ತಮಿಳುನಾಡು ರಾಜ್ಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಟೆಲಿಕಾಂ ಕಂಪನಿಯ ವಿರುದ್ಧ ದೂರು ನೀಡಿದ್ದಾರೆ.



Join Whatsapp