ಗಾಝಾದ ಆಸ್ಪತ್ರೆಗಳು ಯುದ್ಧಭೂಮಿಯಲ್ಲ: ವಿಶ್ವಸಂಸ್ಥೆ, ರೆಡ್ ಕ್ರಾಸ್

Prasthutha|

ಜಿನೆವಾ: ಗಾಝಾದ ಅತಿದೊಡ್ಡ ಆಸ್ಪತ್ರೆ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ವಿಶ್ವಸಂಸ್ಥೆ ಮತ್ತು ರೆಡ್ಕ್ರಾಸ್ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿವೆ. ಆಸ್ಪತ್ರೆಗಳು ಯುದ್ಧಭೂಮಿಯಲ್ಲ ಎಂದು ಹೇಳಿವೆ. ಸಾವಿರಾರು ರೋಗಿಗಳು ಮತ್ತು ನಾಗರಿಕರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿವೆ.

- Advertisement -

ಗಾಝಾದ ಅಲ್-ಶಿಫಾ ಆಸ್ಪತ್ರೆ ಮೇಲಿನ ಮಿಲಿಟರಿ ದಾಳಿಯ ಸುದ್ದಿ‌ ನೋಡಿ ನಾನು ದಿಗ್ಭ್ರಮೆಗೊಂಡಿದ್ದೇನೆ ಎಂದು ವಿಶ್ವಸಂಸ್ಥೆಯ ಮಾನವೀಯ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನವಜಾತ ಶಿಶುಗಳು, ರೋಗಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಎಲ್ಲಾ ನಾಗರಿಕರನ್ನು ರಕ್ಷಿಸಬೇಕು. ಆಸ್ಪತ್ರೆಗಳು ಯುದ್ಧಭೂಮಿಯಲ್ಲ ಎಂದು ಅವರು ಕಟುವಾಗಿ ಇಸ್ರೇಲ್ ನಡೆಯನ್ನು ಟೀಕಿಸಿದ್ದಾರೆ.

ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಸಿದ ಇಸ್ರೇಲ್, ಸ್ವಿಸ್ ನಗರದಲ್ಲಿ ಗ್ರಿಫಿತ್ಸ್ ಅವರೊಂದಿಗೆ ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದೊಲ್ಲಾಹಿಯಾನ್ ಅವರೊಂದಿಗೆ ಸಭೆ ನಡೆಸಿದ್ದೀರಿ. ಇಂದು ಬೆಳಗ್ಗೆ ಇರಾನ್ ವಿದೇಶಾಂಗ ಸಚಿವರನ್ನು ಭೇಟಿ ಮಾಡುವ ಮೊದಲು ಅಥವಾ ನಂತರ ಇದನ್ನು ಟ್ವೀಟ್ ಮಾಡಿದ್ದೀರಾ? ಎಂದು ಪ್ರಶ್ನಿಸಿದೆ.